ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ.3: ಬಾಬರಿ ಮಸೀದಿ ತೀರ್ಪನ್ನು ಜಾರಿಗೊಳಿಸಲು ಕೇಂದ್ರ ಅಡಿಶನಲ್ ಕಾರ್ಯದರ್ಶಿಯವರ ನೇತೃತ್ವದಲ್ಲಿ ಮೂವರ ಸಮಿತಿಯನ್ನು ಕೇಂದ್ರ ನಿಯೋಜಿಸಿದೆ. ವಿವಾದ ಸ್ಥಳದಲ್ಲಿ ಮಂದಿರ ಕಟ್ಟುವುದು, ಮುಸ್ಲಿಂ ವಿಭಾಗಕ್ಕೆ ಐದು ಎಕರೆ ಜಮೀನು ನೀಡುವುದು ಇವೆಲ್ಲ ಕಾರ್ಯಗಳಿಗೆ ಅಡಿಶನಲ್ ಕಾರ್ಯದರ್ಶಿ ಗ್ಯಾನೇಶ್ ಕುಮಾರ್ ನೇತೃತ್ವದ ಸಮಿತಿ ಕೆಲಸ ಮಾಡಲಿದೆ ಎಂದು ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ಮುಸ್ಲಿಮರಿಗೆ ಐದು ಎಕರೆ ಜಮೀನಿಗಾಗಿ ಮೂರು ಜಾಗಗಳನ್ನು ಉತ್ತರಪ್ರದೇಶ ಸರಕಾರ ಗುರುತಿಸಿದೆ.












