ಮೆಹಬೂಬ ಮುಫ್ತಿಯವರ ಗೃಹ ಬಂಧನ ವಿಸ್ತರಣೆ: ಕೇಂದ್ರ ಸರಕಾರದ ತೀರ್ಮಾನವನ್ನು ಖಂಡಿಸಿದ ಉಮರ್ ಅಬ್ದುಲ್ಲ

0
530

ಸನ್ಮಾರ್ಗ ವಾರ್ತೆ

ಶ್ರೀನಗರ,ಮೇ.6: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಗೃಹ ಬಂಧನವನ್ನು ವಿಸ್ತರಿಸಿರುವುದು ನಂಬಲು ಸಾಧ್ಯವಿಲ್ಲದ ರೀತಿಯ ಕ್ರೌರ್ಯ ಮತ್ತು ಖೇದಕರ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಉಮರ್ ಅಬ್ದುಲ್ಲರವರು ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.

ಮೆಹಬೂಬ ಮುಫ್ತಿ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿಯ ಅಧ್ಯಕ್ಷೆ ಕೂಡ ಆಗಿದ್ದಾರೆ. 2019 ಆಗಸ್ಟ್ 5 ರಂದು ಅವರನ್ನು ಗೃಹ ಬಂಧನಕ್ಕೆ ದೂಡಲಾಗಿತ್ತು. ಇನ್ನೂ ಮೂರು ತಿಂಗಳು ವಿಸ್ತರಿಸಲ್ಪಟ್ಟರೆ ಅವರ ಗೃಹ ಬಂಧನಕ್ಕೆ ಒಂದು ವರ್ಷವಾಗಲಿದೆ ಎಂದು ಉಮರ್ ಅಬ್ದುಲ್ಲ ಹೇಳಿದರು.

ಕೇಂದ್ರ ಸರಕಾರದ ತೀರ್ಮಾನವನ್ನು ಅಂಗೀಕರಿಸಲು ಆಗುವುದಿಲ್ಲ. ಇದರ ಹಿಂದೆ ಯಾವ ಪಿತೂರಿಯಿದೆ ಎಂಬುದೂ ಕೂಡ ಅರ್ಥವಾಗುವುದಿಲ್ಲ. ಜಮ್ಮು-ಕಾಶ್ಮಿರದ ಸೌಹಾರ್ದ ವಲಯ ರೂಪಿಸುವುದಕ್ಕಿಂತ ಶತ್ರುಗಳನ್ನು ಸೃಷ್ಟಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಇನ್ನೂ ಇಬ್ಬರು ನಾಯಕರನ್ನು ಜೈಲಿನಲ್ಲಿಡುವ ತೀರ್ಮಾನದೊಂದಿಗೆ ಕೇಂದ್ರ ಸರಕಾರ ತನ್ನ ವಿರುದ್ಧ ಮಾತನಾಡುವವರನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಉಮರ್ ಸರಕಾರದ ಅವಸ್ಥೆಯನ್ನು ತಿಳಿಸಿದರು.

ನ್ಯಾಶನಲ್ ಕಾನ್ಫರೆನ್ಸ್‌ನ ಅಲಿ ಮುಹಮ್ಮದ್ ಸಾಗರ್‌ರಿಗೆ ಪಿಎಸ್‍ಎ ಕಾನೂನಡಿಯಲ್ಲಿ ಮೂರು ತಿಂಗಳ ಜೈಲು ಅನ್ನು ವಿಸ್ತರಿಸಲಾಗಿದೆ. ಈಗ ಜಮ್ಮು-ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಬಂದಿದೆ ಎಂದು ಮೋದಿ ಸರಕಾರ ಕೂಗು ಹಾಕುತ್ತಿದೆ. ಜೊತೆಗೆ ಜಮ್ಮು-ಕಾಶ್ಮೀರವನ್ನು ದಶಕಗಳ ಹಿಂದಕ್ಕೆ ದೂಡುತ್ತಿದೆ ಎಂದು ಅವರು ಆರೋಪಿಸಿದರು.

ಕಾನೂನು ಬಾಹಿರವಾಗಿ ಕಾಶ್ಮೀರದ ಆರ್ಟಿಕಲ್ 370ಯನ್ನು ಕೇಂದ್ರ ಸರಕಾರ ರದ್ದುಪಡಿಸಿದ್ದು ಕೇಂದ್ರ ಸರಕಾರದ ವಿರುದ್ಧ ಧ್ವನಿಯನ್ನು ಸದೆಬಡಿಯುವುದಕ್ಕಾಗಿದೆ ಎಂದು ಮುಫ್ತಿಯ ಪುತ್ರಿ ಇಲ್ತಿಜಾ ಮುಫ್ತಿ ಆರೋಪಿಸಿದ್ದಾರೆ.

ಮೆಹಬೂಬ ಮುಫ್ತಿಯ ಜೈಲು ಸಮಯ ಮೇ 6 ಮುಗಿಯುವುದಿತ್ತು. ಅದಾದ ಬಳಿಕ ಹೊಸ ಆದೇಶದ ಪ್ರಕಾರ ಸಬ್ ಜೈಲೆಂದು ಪರಿಗಣಿಸಿ ಶ್ರಿನಗರದ ಅಧೀಕೃತ ವಸತಿಯಲ್ಲಿ ಗೃಹ ಬಂಧನದಲ್ಲಿರಿಸಲಾಗುವುದು ಎಂದು ಸೂಚನೆ ಲಭ್ಯವಾಗಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.