ಆರು ತಿಂಗಳ ಗೃಹ ಬಂಧನ ಪೂರ್ಣಗೊಳ್ಳಲು ಗಂಟೆಗಳಿರುವಾಗ ಉಮರ್ ಅಬ್ದುಲ್ಲ, ಮೆಹಬೂಬ ಮುಫ್ತಿ ವಿರುದ್ಧ ಕೇಸು

0
1659

ಸನ್ಮಾರ್ಗ ವಾರ್ತೆ

ಶ್ರೀನಗರ, ಫೆ. 7: ಗೃಹ ಬಂಧನಕ್ಕೊಳಗಾಗಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ದುಲ್ಲ ಮತ್ತು ಮೆಹಬೂಬ ಮುಫ್ತಿಯ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾನೂನು ಪ್ರಕಾರ ಕೇಸು ದಾಖಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸಧಿಕಾರಿಗಳು ಹರಿನಿವಾಸ್‍ಗೆ ಹೋಗಿ ಉಮರ್ ರಿಗೆ ವಾರಂಟ್ ಕೊಟ್ಟರು.

ನ್ಯಾಶನಲ್ ಕಾನ್ಫರೆನ್ಸ್ ಪ್ರಧಾನ ಕಾರ್ಯದರ್ಶಿ ಅಲಿ ಮುಹಮ್ಮದ್ ಸಾಗರ್, ಪಿಡಿಪಿ ನಾಯಕ ಶರ್ತಾಜ್ ಮದನಿ ವಿರುದ್ಧವೂ ಕೇಸು ದಾಖಲಿಸಿಕೊಳ್ಳಲಾಗಿದೆ. ಎಲ್ಲರೂ ಆಗಸ್ಟ್ ಐದರಿಂದ ಗೃಹಬಂಧನದಲ್ಲಿದ್ದಾರೆ.