ಈರುಳ್ಳಿ ಬೆಲೆ ಹಠಾತ್ ಏರಿಕೆ ಸಾಧ್ಯತೆ: ಕಾರಣವೇನು ಗೊತ್ತೇ?

0
665

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರೀ ಮಳೆಯಿಂದಾಗಿ ಕೃಷಿ ನಾಶ ಸಂಭವಿಸಿರುವ ಪರಿಣಾಮವಾಗಿ ಈರುಳ್ಳಿ ಬೆಲೆ ಹೆಚ್ಚಳವಾಗಲಿದೆ ಎಂದು ವರದಿಗಳು ತಿಳಿಸಿವೆ. ಕ್ರಮ ರಹಿತವಾಗಿ ಮಳೆ ಸುರಿದು ಈರುಳ್ಳಿ ಕೃಷಿನಾಶವಾಗಿದ್ದು ಇದಕ್ಕೆ ಕಾರಣವೆಂದು ವರದಿಗಳು ತಿಳಿಸಿವೆ. ತೌತೆ ಚಂಡಮಾರುತ ಸಹಿತ ಹವಮಾನ ವೈಪರೀತ್ಯದಿಂದಾಗಿ ರಾಬಿ ಬೆಳೆಗಳಿಗೆ ಸಂರಕ್ಷಣೆ ಹೆಚ್ಚು ಕಾಲ ಅಸಾಧ್ಯವಾಗಿದ್ದು ಹೀಗಾಗಿ ರಾಬಿ ಬೆಳೆಗಳನ್ನು ಕಾಲಕ್ಕೆ ಮುಂಚೆಯೇ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಮಹಾರಾಷ್ಟ್ರ, ಕರ್ನಾಟಕ, ಆಂದ್ರಗಳಲ್ಲಿ ಪ್ರಮುಖವಾಗಿ ಈರುಳ್ಳಿ ಬೆಳೆಯಲಾಗುತ್ತದೆ. ಇಲ್ಲಿ ಭಾರಿ ಮಳೆ ಪೃಕೃತಿ ವಿಕೋಪ ಕೃಷಿನಾಶಕ್ಕೆ ಕಾರಣವಾಗಿದೆ‌.

2018ರಲ್ಲಾದ ಈರುಳ್ಳಿ ಬೆಲೆಗಿಂತ ಶೇ.100ರಷ್ಟು ಹೆಚ್ಚಳ ಈ ಸಲ ಆಗಲಿದೆ ಎಂದು ಕ್ರಿಸಿಲ್ ಸಂಸ್ಥೆ ಹೇಳುತ್ತಿದೆ. ಭಾರತದ ಮನೆ ಬಳಕೆಯ ಈರುಳ್ಳಿ ಜನರನ್ನು ಪುನಃ ಅಳುವಂತೆ ಮಾಡುವ ಸಾಧ್ಯತೆಯಿದೆ. ಅಸಮರ್ಪಕ ಮಾನ್ಸೂನ್ ಮಳೆ, ಖಾರಿಫ್ ಬೆಳೆ ಉತ್ಪನ್ನ ಮಾರಕಟ್ಟೆಗೆ ಬರಲು ತಡವಾಗುವುದು. ಹೆಚ್ಚು ಕಾಲ ಸಂಗ್ರಹಿಸಿಡಲಾಗದ್ದು ಬೆಲೆಯೇರಿಕೆಯ ಸಾಧ್ಯತೆಗಳೆಂದು ಪರಿಸ್ಥಿತಿ ಅವಲೋಕನ ನಡೆಸುವ ಈ ಸಂಸ್ಥೆ ತಿಳಿಸಿತು.

ಖಾರಿಫ್, ಲೇಟ್ ಖಾರಿಫ್, ರಾಬಿ ಹೀಗೆ ಮೂರು ಋತುಮಾನಗಳಲ್ಲಿ ಈರುಳ್ಳಿ ಬೆಳೆ ತೆಗೆಯಲಾಗುತ್ತದೆ. ಪ್ರತಿತಿಂಗಳು ಸುಮಾರು 13 ಲಕ್ಷ ಕ್ವಿಂಟಲ್ ಈರುಳ್ಳಿಯನ್ನು ಭಾರತೀಯರು ಮನೆ ಅಡುಗೆಗೆ ಉಪಯೋಗಿಸುತ್ತಾರೆ.

ಮಹಾರಾಷ್ಟ್ರ ಕರ್ನಾಟಕ, ಆಂದ್ರ ಪ್ರದೇಶದಲ್ಲಿ ಖಾರಿಫ್‍ನಲ್ಲಿ ಮುಖ್ಯವಾಗಿ ಈರುಳ್ಳಿ ಬೆಳೆಯುತ್ತಾರೆ. ಖಾರಿಫ್ ಉತ್ಪಾದನೆಯ ಶೇ.75ರಷ್ಟು ಇಲ್ಲಿಯೇ ಆಗುವುದು.

ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿತು. ಎರಡು ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಸಂಗ್ರಹಿಸಿಟ್ಟಿದ್ದೇವೆ ಎಂದು ಅದು ತಿಳಿಸಿತು. ಹಿಂದಿನ ಕಾಲದ ಲೆಕ್ಕವನ್ನು ನೋಡಿದರೆ ಸೆಪ್ಟಂಬರ್‌ನಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗುತ್ತದೆ. ಈರುಳ್ಳಿ ಕೃಷಿಗೆ ತೊಡಗುವುದು ಸೆಪ್ಟಂಬರಿನಲ್ಲೇ. ನಂತರ ಮೂರು ತಿಂಗಳ ನಂತರ ಈರುಳ್ಳಿ ಕೊಯ್ಲು ಮಾಡಲಾಗುತ್ತದೆ. ಕೊಯ್ಲಿನ ನಂತರ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here