ಪೆಟ್ರೋಲ್, ಡೀಸೆಲ್ ಜಿಎಸ್‍ಟಿ ವ್ಯಾಪ್ತಿಗೆ: ಶುಕ್ರವಾರ ಉನ್ನತ ಮಟ್ಟದ ಸಭೆ

0
314

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ:ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ಕುರಿತು ಕೇಂದ್ರ ಸರಕಾರದಲ್ಲಿ ಚಿಂತನೆ ನಡೆದಿದ್ದು ಲಕ್ನೊದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‍ರ ಅಧ್ಯಕ್ಷತೆಯಲ್ಲಿ ಸೇರುವ ಜಿಎಸ್‍ಟಿ ಕೌನ್ಸಿಲಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ವರದಿಯಾಗಿದೆ. ಜಿಎಸ್ಟಿ ಸಿಸ್ಟಂ ಏನಾದರೂ ಬದಲಾವಣೆ ಮಾಡುವುದಾದರೆ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳ ಪ್ರತಿನಿಧಿಗಳಿರುವ ಜಿಎಸ್‍ಟಿ ಕೌನ್ಸಿಲ್‍ನಲ್ಲಿ ನಾಲ್ಕರಲ್ಲಿ ಮೂರರಷ್ಟು ಬಹುಮತ ಬೇಕಾಗಿದೆ. ಆದರೆ ಕೆಲವು ರಾಜ್ಯಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿಗೊಳಪಡಿಸುವುದನ್ನು ವಿರೋಧಿಸುತ್ತಿವೆ. ಆದ್ದರಿಂದ ಇಂಧನ ಜಿಎಸ್ಟಿಗೆ ಸೇರುವುದು ಸಂಶಯ ಎನ್ನಲಾಗುತ್ತಿದೆ.

ತೈಲದ ನಿಜವಾದ ದರದ ಅರ್ಧಕ್ಕಿಂತಲೂ ಹೆಚ್ಚು ಕೇಂದ್ರ ಮತ್ತು ರಾಜ್ಯ ಸರಕಾರಗಳ ತೆರಿಗೆ ಬೀಳುತ್ತಿವೆ. ತೆರಿಗೆ ದರ ಏಕೀಕರಣವಾದರೆ ತೈಲ ಬೆಲೆಯಲ್ಲಿ ಕಡಿಮೆ ಆಗಬಹುದು. ಆದರೆ ಇದರಿಂದ ರಾಜ್ಯಗಳ ಆದಾಯಕ್ಕೆ ಖೋತ ಆಗುತ್ತದೆ. ತೆರಿಗೆ ನಿರ್ಧರಿಸುವ ಹಕ್ಕು ರಾಜ್ಯ ಸರಕಾರಗಳಿಗಿವೆ. ಜಿಎಸ್‍ಟಿಗೆ ತೈಲ ದರವನ್ನು ಸೇರಿಸುವುದು ರಾಜ್ಯಗಳ ಈ ಹಕ್ಕಿನ ವಿರುದ್ಧ ಹಸ್ತಕ್ಷೇಪವಾಗಿದೆ ಎಂದು ಕೇರಳದ ವಿತ್ತ ಸಚಿವ ಕೆಎನ್ ಬಾಲಗೋಪಾಲ್ ಹೇಳಿದ್ದಾರೆ. ಜಿಎಸ್‍ಟಿಗೆ ಪೆಟ್ರೋಲನ್ನು ಸೇರಿಸುವುದನ್ನು ಕೇರಳ ಬಲವಾಗಿ ವಿರೋಧಿಸುತ್ತಿದೆ.

ಇದೇವೇಳೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿಗೆ ಸೇರಿಸುವುದರಲ್ಲಿ ಕೇಂದ್ರ ಸರಕಾರಕ್ಕೂ ಅಂತಹ ಆಸಕ್ತಿಯಿಲ್ಲ. ಆದರೆ ಜಿಎಸ್‍ಟಿಗೆ ಸೇರಿಸಲಾಗುವುದು ಎಂಬುದಕ್ಕೆ ರಾಜ್ಯಗಳು ವಿರೋಧಿಸಿದರೆ ‘ಜಿಎಸ್‍ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಅಡ್ಡಿಯಾಗಿವೆ ಎಂದು ಪ್ರಚಾರ ಮಾಡಬಹುದೆಂದು, ಇದು ಕೇಂದ್ರ ಸರಕಾರದ ಉದ್ದೇಶಪೂರ್ವಕ ನಡೆ’ ಎಂದು ಹೇಳಲಾಗುತ್ತಿದೆ. ‘ಗುಜರಾತ್, ಉತ್ತರಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ವಿಪಕ್ಷಗಳ ವಿರುದ್ಧ ಪ್ರಧಾನ ಆಯುಧವಾಗಿ ಇದನ್ನೆತ್ತಿಕೊಳ್ಳುವ ರಾಜಕೀಯ ಸಂಚು ಇದೆ’ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here