ಆಪರೇಷನ್‌ ಕಮಲದ ಮೇಲೆ ಬಲಗೊಂಡ ಸಂಶಯ: ಇಬ್ಬರು ಶಾಸಕರಿಂದ ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆ!

0
749

ಬೆಂಗಳೂರು, ಜ.15: ಮೈತ್ರಿ ಸರಕಾರಕ್ಕೆ ಬೆಂಬಲವನ್ನು ನೀಡಿದ್ದ ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದು ಕೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಹಲವಾರು ಗೊಂದಲಗಳನ್ನು ಸೃಷ್ಟಿಸಿದೆ. ಇದು ಆಪರೇಷನ್ ಕಮಲದ ಭಾಗವೇ ಅಥವಾ ಮೈತ್ರಿ ಸರಕಾರದಲ್ಲಿ ಈಗಲೂ ಅಭದ್ರತೆ ನೆಲೆಸಿದೆಯೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಂತಾಗಿದೆ.

ರಾಣೆಬೆನ್ನೂರು ಕ್ಷೇತ್ರದ ಮಾಜಿ ಸಚಿವ ಆರ್. ಶಂಕರ್ ಮತ್ತು ಮುಳುಬಾಗಿಲು ಕ್ಷೇತ್ರದ ಶಾಸಕ ಎಚ್. ನಾಗೇಶ್ ಮೈತ್ರಿ ಸರಕಾರದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದು ರಾಜ್ಯಪಾಲರಿಗೆ ಈ ಕುರಿತು ಪತ್ರವನ್ನು ಬರೆದಿದ್ದು “ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ನೀಡಿದ್ದ ನಮ್ಮ ಬೆಂಬಲವನ್ನು ಹಿಂಪಡೆದಿದ್ದೇವೆ ಹಾಗೂ ಮುಂದಿನ ಕ್ರಮಗಳನ್ನು ಕೈಗೊಳ್ಳ ಬೇಕೆಂದು ಪ್ರತ್ಯೇಕ ಪತ್ರಗಳಲ್ಲಿ ಬೇಡಿಕೆಯನ್ನಿರಿಸಿದ್ದಾರೆ.

ಇಬ್ಬರು ಶಾಸಕರೂ ಕೂಡ ಬೆಂಬಲ ಹಿಂಪಡೆಯಲಿರುವ ಕಾರಣವನ್ನು ಪತ್ರದಲ್ಲಿ ತಿಳಿಸಿಲ್ಲವಾದರೂ ಮೈತ್ರಿ ಸರಕಾರವು ಬೇಡಿಕೆಗಳನ್ನು ಈಡೇರಿಸುವಲ್ಲಿ ಸಫಲವಾಗದಿರುವುದೇ ಕಾರಣವೆಂಬ ಅಂಶಗಳು ಕೇಳಿಬರುತ್ತಿವೆ.