ಬಿಹಾರದಲ್ಲಿ ಮತ್ತೆ ಎನ್‍ಡಿಎ ಸರಕಾರ- ಸಮೀಕ್ಷೆ

0
592

ಸನ್ಮಾರ್ಗ ವಾರ್ತೆ

ಪಾಟ್ನ,ಅ.21: ಬಿಹಾರದಲ್ಲಿ ಎನ್‍ಡಿಎ ಸರಕಾರ ಈ ಸಲವೂ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಲೋಕನೀತಿ-ಸಿಎಸ್ಡಿಎಸ್ ಸಮೀಕ್ಷೆ ತಿಳಿಸಿದೆ. ಜೆಡಿಯು ಬಿಜೆಪಿ ನೇತೃತ್ವದ ಎನ್‍ಡಿಎಗೆ 243 ಸದಸ್ಯರ ವಿಧಾನಸಭೆಯಲ್ಲಿ 133, 143 ಸ್ಥಾನಗಳು ಲಭಿಸಲಿವೆ ಎಂದು ತಿಳಿಸಿದೆ. ಆರ್‍ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಸಖ್ಯಕ್ಕೆ 88ರಿಂದ 98 ಸ್ಥಾನಗಳು ಲಭಿಸಲಿವೆ ಎಂದು ಸಮೀಕ್ಷೆ ತಿಳಿಸಿದೆ. ಎನ್‍ಡಿಎಗೆ ಶೇ38ರಷ್ಟು ಮತ್ತು ಪ್ರತಿಪಕ್ಷಕ್ಕೆ ಶೇ. 32 ಮತಗಳಿಸಲು ಸಾಧ್ಯವಾಗಬಹುದು ಸಮೀಕ್ಷೆ ಪ್ರವಚಿಸಿದೆ.

ಎನ್‍ಡಿಎ ಲೋಕ ಜನಶಕ್ತಿ ಪಾರ್ಟಿ ಈ ಸಲ ಎನ್‍ಡಿಎಯಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ. ಎಲ್‍ಜೆಪಿಗೆ ಶೇ.6ರಷ್ಟು ಮತಗಳು ಸಿಗಲಿದ್ದು ಇದು ಎನ್‍ಡಿಎಗೆ ಲಾಭವಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಮಹಾಸಖ್ಯಕ್ಕೆ ಲಭಿಸಬೇಕಾದ ಆಡಳಿತ ವಿರೋಧಿ ಮತಗಳಲ್ಲಿ ದೊಡ್ಡ ಪಾಲು ಎಲ್‍ಜೆಪಿ ಗಳಿಸಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಇತರ ಪಾರ್ಟಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳೆಲ್ಲರೂ ಸೇರಿ ಶೇ.17ರಷ್ಟು ಮತಗಳಿಸಲಿದ್ದಾರೆ. 6-1೦ರವರೆಗೆ ಇವರ ಪಾಲಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಮುಖ್ಯಮಂತ್ರಿ ನಿತೀಶ್‍ರನ್ನು ಶೇ.31ರಷ್ಟು ಮಂದಿ ಬೆಂಬಲಿಸಿದರೆ ಆರ್‍ಜೆಡಿ ನಾಯಕ ತೇಜಸ್ವಿ ಯಾದವ್‍ರನ್ನು ಶೇ. 27ರಷ್ಟು ಮಂದಿ ಬೆಂಬಲಿಸುತ್ತಿದ್ದಾರೆ. ಶೇ.5ರಷ್ಟು ಮಂದಿ ಚಿರಾಗ್ ಪಾಸ್ವಾನ್‍ರನ್ನು ಬೆಂಬಲಿಸುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯನ್ನು ಹೋಲಿಸಿದರೆ ನಿತೀಶ್ ಕುಮಾರ್ ಜನಪ್ರಿಯತೆಯಲ್ಲಿ ಹೆಚ್ಚಿನ ಕುಸಿತ ಕಂಡು ಬಂದಿದೆ. ಈಗ ಎನ್‍ಡಿಗೆ 125ರಷ್ಟು(ಜೆಡಿಯು67-ಬಿಜೆಪಿ 53) ಮಹಾಸಖ್ಯಕ್ಕೆ 100 (ಆರ್‍ಜೆಡಿ 73-ಕಾಂಗ್ರೆಸ್ 23)ಸ್ಥಾನಗಳಿವೆ. ಅಕ್ಟೋಬರ್ 28ಕ್ಕೆ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆ ನಡೆಯಲಿದೆ.