ಚಿಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಚರ್ಚಿಗೆ ಬೆಂಕಿ

0
747

ಸನ್ಮಾರ್ಗ ವಾರ್ತೆ

ಸಾಂಟಿಯಾಗೊ: ಚಿಲಿಯ ರಾಜಧಾನಿಯಾದ ಸಾಂಟಿಯಾಗೊದಲ್ಲಿ ಪ್ರತಿಭಟನಾಕಾರರು ಎರಡು ಕ್ರೈಸ್ತ ಚರ್ಚ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಅಂಗಡಿಗಳನ್ನು ದೋಚಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.

ಸರ್ವಾಧಿಕಾರಿ ಕಾಲದ ಸಂವಿಧಾನ ಬೇಕೆ ಎಂಬ ಜನಮತ ಸಂಗ್ರಹ ಇಲ್ಲಿ ನಡೆಯಲಿದ್ದು, ಇದೇ ವೇಳೆ ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದಿದ್ದಾರೆ. ಕಳೆದ ವರ್ಷ ನಡೆದ ಸರಕಾರ ವಿರೋಧೀ ಹೋರಾಟದ ವಾರ್ಷಿಕ ದಿನದಲ್ಲಿ 25,000 ಮಂದಿ ಸೇರಿದ್ದರು.

ಮೊದಲು ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು. ನಂತರ ಪ್ರತಿಭಟನೆ ಹಿಂಸಾಚಾರಮಯವಾಯಿತು. ಪ್ರತಿಭಟನಾಕಾರರು ವಿವಿಧ ಗುಂಪುಗಳಾಗಿ ಘರ್ಷಣೆ ನಡೆಸಿದರು. ಪ್ರತಿಭಟನಾಕಾರರು ಕ್ರೂರವಾಗಿ ವರ್ತಿಸಿದ್ದಾರೆ ಎಂದು ಸರಕಾರ ತಿಳಿಸಿದೆ.