ಮೆಲ್ಬರ್ನ್,ಜೂ.21: ವೀರ್ಯದಾನಿ ಮಗುವಿನ ನಿಜವಾದ ತಂದೆಯಾಗುತ್ತಾನೆ ಎಂದು ಆಸ್ಟ್ರೇಲಿಯದ ಹೈಕೋರ್ಟು ತೀರ್ಪು ನೀಡಿದೆ. 11 ವಯಸ್ಸಿನ ಹುಡುಗಿಯ ಪಿತೃತ್ವದ ಕುರಿತ ಪ್ರಕರಣದಲ್ಲಿ ಉನ್ನತ ಕೋರ್ಟು ತೀರ್ಪು ನೀಡಿದ್ದು 2016ರಲ್ಲಿ ಪ್ರಕರಣಕ್ಕೆ ಆಸ್ಪದವಾದ ಘಟನೆ ನಡೆದಿದೆ. 49 ವರ್ಷದ ಆಸ್ಟ್ರೇಲಿಯದ ವ್ಯಕ್ತಿ ಮತ್ತು ಮಗುವಿನ ತಾಯಿಯ ಜತೆ ಗೆಳೆತನವಿತ್ತು. ಮಹಿಳೆ ತನಗೆ ಮಗು ಬೇಕು ಎಂದು ಹೇಳಿದಾಗ ಆತ ವೀರ್ಯದಾನ ಮಾಡಿದ್ದ. ಕೃತಕ ಗರ್ಭದಾರಣೆಯ ಮೂಲಕ ಹೆರಿಗೆಯಾಗಿತ್ತು. ನಂತರ ಇಬ್ಬರು ದೂರವಾಗಿದ್ದರು. ಮಗು ಯುವಕನದ್ದಲ್ಲ ಎಂದು ಮಹಿಳೆ ವಾದಿಸಿದ್ದರು. ನಂತರ ಕೋರ್ಟಿಗೆ 11 ವರ್ಷದ ಬಾಲಕಿಯ ಸರ್ಟಿಫಿಕೆಟ್ ಹಾಜರು ಪಡಿಸಲಾಗಿತ್ತು. ಮಗುವಿನ ನಿಜವಾದ ತಂದೆ ವೀರ್ಯದಾನಿ ರಾಬರ್ಟ್ ಎಂದು ಕೋರ್ಟು ಹೇಳಿತು. ಮಗುವನ್ನು ನ್ಯೂಝಿಲೆಂಡಿಗೆ ಕರೆದೊಯ್ಯದಂತೆ ತಡೆದಿದೆ.












