ಪಾಕಿಸ್ತಾನಕ್ಕೆ ಮಲೇರಿಯ ಮದ್ದು ಖರೀದಿಸುವ ಶಕ್ತಿ ಇಲ್ಲ- ಉವೈಸಿ

0
506

ಸನ್ಮಾರ್ಗ ವಾರ್ತೆ

ಲಕ್ನೊ: ಅಸದುದ್ದೀನ್ ಉವೈಸಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ. ಕ್ರಿಕೆಟ್ ಗೆಲುವಿನ ಬಗ್ಗೆ ತಪ್ಪು ಹೇಳಿಕೆ ಕೊಡಬೇಡಿ. ಪಾಕಿಸ್ತಾನಕ್ಕೆ ಮಲೇರಿಯದ ಮದ್ದು ಕೂಡ ಖರೀದಿಸುವ ಶಕ್ತಿ ಇಲ್ಲ. ನಮ್ಮ ದೇಶದಲ್ಲಿ ಏನೇ ಆದರೂ ಅದು ನಮ್ಮ ಮನೆಯ ವಿಚಾರ. ಇದೇ ವೇಳೆ ಬೌಲರ್ ಶಮಿಯ ಪರವಹಿಸಿದ ಅವರು ಶಮಿಯನ್ನು ದೂರುವುದು ಯಾವ ನ್ಯಾಯವೆಂದು ಪ್ರಶ್ನಿಸಿದರು.

ಅಸದುದ್ದೀನ್ ಉವೈಸಿ ಪಾಕಿಸ್ತಾನದ ಗೃಹ ಸಚಿವ ಶೇಖ್ ರಶೀದ್‍ರ ಹೇಳಿಕೆಗೂ ಖಾರವಾದ ಪ್ರತ್ಯುತ್ತರ ನೀಡಿದ್ದರು. ನಮ್ಮ ನೆರೆಯ ದೇಶದ ಒಬ್ಬ ಸಚಿವ ಹುಚ್ಚ. ಅವನು ಕ್ರಿಕೆಟ್‍ನಲ್ಲಿ ಭಾರತ ಸೋತದಕ್ಕೆ ಇಸ್ಲಾಮಿನ ಗೆಲುವು ಎನ್ನುತ್ತಾನೆ. ಅಲ್ಲಾಹನಿಗೆ ಕೃತಜ್ಞತೆಗಳು. ನಾವು ಅಲ್ಲಿಗೆ ಹೋಗಿಲ್ಲವಲ್ಲ. ಇಲ್ಲದಿದ್ದರೆ ಇಂತಹ ಹುಚ್ಚರನ್ನು ನೋಡಬೇಕಾಗುತ್ತಿತ್ತು. ಇಸ್ಲಾಮ್ ಮತ್ತು ಕ್ರಿಕೆಟ್‍ಗೂ ಏನು ಸಂಬಂಧವೆಂದು ಉವೈಸಿ ಪ್ರಶ್ನಿಸಿದ್ದರು.