ಕಾಪು: ಆಶಾ ಕಾರ್ಯಕರ್ತರಿಗೆ HRS ವತಿಯಿಂದ ಆಕ್ಸಿಮೀಟರ್ , ಮಾಸ್ಕ್ , ಸ್ಯಾನಿಟೈಸರ್ ವಿತರಣೆ

0
376

ಸನ್ಮಾರ್ಗ ವಾರ್ತೆ

ಕಾಪು : ಪ್ರಾಥಮಿಕ ಅರೋಗ್ಯ ಕೇಂದ್ರ ಕಾಪು ವಲಯದ ಮಲ್ಲಾರು ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತರಿಗೆ ಕಾಪು ವರ್ತುಲದ ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಹೆಚ್. ಆರ್. ಎಸ್. ವತಿಯಿಂದ ಅಗತ್ಯವಿರುವಷ್ಟು ಉತ್ತಮ ಗುಣಮಟ್ಟದ ಆಕ್ಸಿಮೀಟರ್ , ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಮಲ್ಲಾರು ಕೊಂಬಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಜೆ. ಐ. ಹೆಚ್. ಕಾಪು ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಮುಹಮ್ಮದ್ ಇಮ್ರಾನ್ , ಪೊಲೀಸ್ ಇಲಾಖೆಯ ಕ್ರೈಮ್ ವಿಭಾಗದ ಅಬ್ದುಲ್ ರಝಾಕ್, ಕಿರಿಯ ಅರೋಗ್ಯ ಸಹಾಯಕ ಶ್ರೀ ಹೇಮಂತ್ , ಕಿರಿಯ ಅರೋಗ್ಯ ಸಹಾಯಕಿಯರಾದ ಶ್ರೀಮತಿ ಯಶೋಧಾ , ಹೀರಾ , ಆಶಾ ಸುಗಮಕಾರರು ಸುಭಾಷಿಣಿ , ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿರಿದ್ದರು.