ಫೆಲೆಸ್ತೀನ್ ಪರ ಪ್ರತಿಭಟಣೆ ಹತ್ತಿಕ್ಕುತ್ತಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ ‘ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು’ ಒಕ್ಕೂಟದಿಂದ ಪತ್ರಿಕಾಗೋಷ್ಠಿ

0
4287

ಸನ್ಮಾರ್ಗ ವಾರ್ತೆ

ಕದನ ವಿರಾಮಕ್ಕಾಗಿ ವಿಶ್ವ ಸಂಸ್ಥೆಯಲ್ಲಿ ಸಲ್ಲಿಸಿದ್ದ ನಿರ್ಣಯದ ಪರ ಭಾರತ ಮತ ಹಾಕದೇ ಇರುವುದು ಮತ್ತು ರಾಜ್ಯ ಸರಕಾರವು ಫೆಲೆಸ್ತೀನ್ ಪರ ಪ್ರತಿಭಟಣೆಯನ್ನು ಹತ್ತಿಕ್ಕುತ್ತಿರುವುದನ್ನು ಖಂಡಿಸಿ ಇಂದು ‘ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು’ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು.

ಈ ಪತ್ರಿಕಾ ಗೋಷ್ಠಿಯಲ್ಲಿ PUCL ನ ಶ್ರೀ ಆಕಾರ್ ಪಟೇಲ್, ಸೋಲಿಡಾರಿಟಿ ಯೂತ್ ಮೂವ್ಮೆಂಟ್‌ನ, ಕರ್ನಾಟಕ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ, AICCTU ನ ರಾಷ್ಟ್ರೀಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜಾರಿಯೋ, ಪಿಯುಸಿಎಲ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅರವಿಂದ ನಾರಾಯಣ್, ಕರ್ನಾಟಕ ಜನಶಕ್ತಿಯ ಗೌರಿ, ಯುವ ಪರಿಸರವಾದಿಗಳಾದ ನಿಶ್ಕಲಾ ಭಾಗವಹಿಸಿದ್ದರು.