‘ನಿರ್ಭೀತ ಜಡ್ಜ್’ ಎಸ್. ಮುರಳೀಧರ್ ಈಗ ಸುಪ್ರೀಂ ಕೋರ್ಟ್ ವಕೀಲ

0
238

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ನ.7: ಪ್ರಧಾನ ತೀರ್ಪುಗಳನ್ನು ನಿರ್ಭೀತಿಯಿಂದ ನೀಡಿದ್ದ  ನಿರ್ಭೀತ ಜಡ್ಜ್ ಎಂದು ಹೆಸರುವಾಸಿಯಾಗಿದ್ದ ಒಡಿಸ್ಸ ಹೈಕೋರ್ಟಿನ ಮಾಜಿ ಚೀಫ್ ಜಸ್ಟಿಸ್ ಎಸ್ ಮುರಳೀಧರನ್ ಸೀನಿಯರ್ ವಕೀಲರಾಗಿ ಪ್ರಾಕ್ಟಿಸ್ ಮಾಡಲಿದ್ದಾರೆ.

2020 ಮಾರ್ಚ್ 20ಕ್ಕೆ ಅವರನ್ನು ಪಂಜಾಬ್-ಹರಿಯಾಣ ಹೈಕೋರ್ಟಿಗೆ ರಾತ್ರೋ ರಾತ್ರೆ ವರ್ಗಾಯಿಸಲಾಗಿತ್ತು. ಇದು ತುಂಬ ಟೀಕೆಗೊಳಗಾದ ವರ್ಗಾವಣೆಯಾಗಿತ್ತು. ಸುಪ್ರೀಂ ಕೋರ್ಟಿನ ಕೊಲೆಜಿಯಂನ ಅಂದಿನ ತೀರ್ಮಾನವನ್ನು ದಿಲ್ಲಿ ಹೈಕೋರ್ಟು ಬಾರ್ ಅಸೋಸಿಯೇಶನ್ ಸಹಿತ ಹಲವರು ಪ್ರತಿಭಟಿಸಿದ್ದರು.

ದಿಲ್ಲಿಯ ಪೌರತ್ವ ಹೋರಾಟಕ್ಕೆ ಸಂಬಂಧಿಸಿ ನಡೆದ ಕೋಮು ಗಲಭೆಗೆ ಚಾಲನೆ ನೀಡಿದವರು ಎಂದು ಆರೋಪಿಸಲ್ಪಟ್ಟಿದ್ದ ಮೂವರು ಬಿಜೆಪಿ ನಾಯಕರ ದ್ವೇಷ ಭಾಷಣದಲ್ಲಿ ಕೇಸು ದಾಖಲಿಸಿಕೊಳ್ಳದ ಪೊಲೀಸ್ ಅನ್ನು ಜಸ್ಟಿಸ್ ಮುರಳೀಧರನ್ ಕಟುವಾಗಿ ತರಾಟೆಗೆ ಎತ್ತಿಕೊಂಡಿದ್ದರು. ಜಡ್ಜ್ ಮುರಳೀಧರನ್‍ರ ಈ ಕ್ರಮದ ನಂತರ ಅವರನ್ನು ವರ್ಗಾವಣೆಗೊಳಪಡಿಸಲಾಗಿತ್ತು.

ಮದ್ರಾಸ್ ಹೈಕೋರ್ಟಿನ ಪ್ರತಿಕೂಲ ಹೇಳಿಕೆಯ ವಿರುದ್ಧ ನಿವೃತ್ತ ಮಹಿಳಾ ಜ್ಯೂಡಿಶಿಯಲ್ ಅಧಿಕಾರಿ ಸಲ್ಲಿಸಿದ ಅರ್ಜಿಯಲ್ಲಿ ತಮಿಳ್ನಾಡಿನವರೇ ಆದ ಜಸ್ಟಿಸ್ ಮುರಳೀಧರನ್ ಸೋಮವಾರ ಹಾಜರಾದರು. ಅಕ್ಟೋಬರ್ ಹದಿನಾರಕ್ಕೆ ಸುಪ್ರೀಂಕೋರ್ಟು ಮುರಳೀಧರನ್‍ರಿಗೆ ಸೀನಿಯರ್ ವಕೀಲ ಸ್ಥಾನವನ್ನು ನೀಡಿತ್ತು. ಇನ್ನು ಸಹೋದರ ಮುರಳೀಧರ್ ಎಂದು ಹೇಳಲಾಗದಿದ್ದರೂ ಮಿಸ್ಟರ್ ಮುರಳೀಧರ್ ಎಂದು ಹೇಳಬಹುದು ಚೀಫ್ ಜಸ್ಟಿಸ್ ಮುರಳೀಧರನ್‍ರನ್ನು ಉದ್ದೇಶಿಸಿ ಹೇಳಿದ್ದರು. ಮುರಳೀಧರನ್ ಯಾರ ಪರ ಹಾಜರಾದರೂ ಅವರೊಬ್ಬ ಆಸ್ತಿಯಾಗಿದ್ದಾರೆ ಎಂದು ವಕೀಲರೊಬ್ಬರು ಪ್ರತಿಕ್ರಿಯಿಸಿದರು.

ಸಂವಿಧಾನ ಪ್ರಕಾರ ನಿವೃತ್ತ ಹೈಕೋರ್ಟ್ ಜಡ್ಜ್ ಗಳಿಗೆ ಅವರು ಸೇವೆ ಸಲ್ಲಿಸದ ಹೈಕೋರ್ಟು ಮತ್ತು ಸುಪ್ರೀಂಕೋರ್ಟಿನಲ್ಲಿ ವಕೀಲರಾಗಿ ಪ್ರಾಕ್ಟಿಸ್ ಮಾಡಬಹುದಾಗಿದೆ.