ಇಸ್ರೇಲ್ ಚೆಕ್‍ಪೋಸ್ಟ್ ದಾಟಲು ಫೆಲೆಸ್ತೀನಿಯರಿಗೆ ಮೊಬೈಲ್ ಆ್ಯಪ್

0
572

ಗಾಝಸಿಟಿ, ಆ.8: ಅತಿಕ್ರಮಿತ ವೆಸ್ಟ್ ಬ್ಯಾಂಕಿನ ಇಸ್ರೇಲ್ ಚೆಕ್‍ಪೋಸ್ಟ್ ದಾಟಲು ಫೆಲೆಸ್ತೀನಿಯರಿಗೆ ಮೊಬೈಲ್ ಆಪ್ಲಿಕೇಶನ್ ಹೊರಬಂದಿದೆ. ಫೆಲಸ್ತೀನಿನ ಪ್ರಧಾನ ನಗರಗಳ ರಸ್ತೆಗಳು ಮತ್ತು ಇಸ್ರೇಲ್ ಸೇನೆಯ ಚೆಕ್‍ಪೋಸ್ಟ್ ಗಳು ಇಲ್ಲದ ಮಾರ್ಗಗಳನ್ನು ಫೆಲೆಸ್ತೀನ್ ಚಾಲಕರಿಗೆ ಈ ಅಪ್ಲಿಕೇಶನ್ ತಿಳಿಸಿಕೊಡಲಿದೆ. ಡೊರೂಬ್ ನಾವಿಗೇಟರ್ ಎಂದು ಅಪ್ಲಿಕೇಶನ್ ಹೆಸರು. ಫೆಲಸ್ತೀನಿಯರೇ ಈ ಅಪ್ಲಿಕೇಶನ್ ತಯಾರಿಸಿದ್ದು ಕಳೆದ ಜೂನ್‍ನಲ್ಲಿ ಹೊರಗೆ ಬಂದಿದೆ.

ಇಸ್ರೇಲಿನ ನಿಯಂತ್ರಣಗಳನ್ನು ಮೀರಿ ಮುಂದೆ ಸಾಗಲು ಸಹಾಯಕವಾಗುವಂತೆ ತಮ್ಮ ಹೋರಾಟದ ಭಾಗವಾಗಿ ಅಪ್ಲಿಕೇಶನನ್ನು ಕೂಡ ಫೆಲೆಸ್ತೀನಿಯರು ಪರಿಗಣಿಸಿದ್ದಾರೆ. ಸೇನೆ ಇರುವ ಮಾರ್ಗಗಳನ್ನು ಅರಿತು ಬೇರೆ ದಾರಿಯಲ್ಲಿ ಸಾಗಲು ಗೂಗಲ್ ಮ್ಯಾಪ್‍ನಂತೆ ಅಪ್ಲಿಕೇಶನ್ ಕೆಲಸ ಮಾಡಲಿದೆ. ಇದನ್ನು ಫೆಲಸ್ತೀನ್ ನಗರಗಳ ದಾರಿಸೂಚಕ ಅಪ್ಲಿಕೇಶನ್ ಎಂದು ಸದ್ಯ ಹೇಳಲಾಗುತ್ತಿದೆ.