ಕೊರೋನಾದಿಂದ 2 ತಿಂಗಳ ಹಸುಳೆ ಮೃತ್ಯು: ಮೃತದೇಹ ಆಸ್ಪತ್ರೆಯಲ್ಲೇ ತೊರೆದು ನಾಪತ್ತೆಯಾದ ತಂದೆ-ತಾಯಿ

0
530

ಸನ್ಮಾರ್ಗ ವಾರ್ತೆ

ಜಮ್ಮು: ಕೊರೋನ ಪೀಡಿತ ಎರಡು ತಿಂಗಳ ಹಸುಳೆಯ ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ತಂದೆ ತಾಯಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಪೋಷಕರನ್ನು ಹುಡುಕಿ ಮಗುವಿನ ಮೃತದೇಹವೊಪ್ಪಿಸುವ ಯತ್ನ ವಿಫಲವಾಗಿದೆ. ತಂದೆ ತಾಯಿ ಬಂದು ಮಗುವಿನ ಪಾರ್ಥಿಹ ಶರೀರವನ್ನು ಕೊಂಡು ಹೋಗದಿದ್ದರೆ ಕೊರೋನ ಮಾನದಂಡದಂತೆ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನ ಶ್ರೀ ಮಹಾರಾಜ ಗುಲಾಬ್ ಸಿಂಗ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಕಳೆದ ರವಿವಾರ ಬೆಳಗ್ಗೆ ಏಳು ಗಂಟೆಗೆ ಮಗುವನ್ನು ಆಸ್ಪತ್ರೆಗೆ ತರಲಾಗಿತ್ತು. ರಾತ್ರಿ ಎಂಟು ಗಂಟೆಗೆ ಮಗುವಿಗೆ ಹೃದಯಾಘಾತವಾಗಿ ಮೃತಪಟ್ಟಿತು. ನಂತರ ಕೊರೋನ ಪರೀಕ್ಷೆ ಮಾಡಲಾಯಿತು. ಮಗುವಿಗೆ ಕೊರೋನ ದೃಢಪಟ್ಟ‌ ವಿಷಯ ತಂದೆ-ತಾಯಿಗೆ ತಿಳಿಸಿ ನೀವು ಕೂಡ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವೈದ್ಯರು ಹೇಳಿದರು. ಆದರೆ ಪರೀಕ್ಷೆ ಮಾಡಿಸಿಕೊಂಡು ಬರುತ್ತೇವೆ ಎಂದು ಹೇಳಿದ ಮಗುವಿನ ತಂದೆ-ತಾಯಿ ಮಗುವಿನ ಮೃತದೇಹ ಅಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದಾರೆಂದು ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here