ಕಾಂಗ್ರೆಸ್ ಸರಕಾರದಿಂದ ನ್ಯಾಯ ನಿರೀಕ್ಷಿಸಿದ್ದೆ- ಪೆಹ್ಲೂಖಾನ್ ಪುತ್ರ

0
1331

ಜೈಪುರ, ಜೂ. 29: ಕಾಂಗ್ರೆಸ್ ಸರಕಾರದಿಂದ ನ್ಯಾಯವನ್ನು ನಿರೀಕ್ಷಿಸಿದ್ದೆ ಎಂದು ಗೋರಕ್ಷಾ ಗೂಂಡಾಗಳಿಂದ ಕೊಲೆಯಾದ ಪೆಹ್ಲೂ ಖಾನ್‍ ರ ಹಿರಿಯ ಪುತ್ರ ಇರ್ಷಾದ್ ಹೇಳಿದ್ದಾರೆ. ಕೊಲೆಯಾದ ಎರಡು ವರ್ಷದ ಬಳಿಕ ಪೆಹ್ಲೂ ಖಾನ್ ವಿರುದ್ದ ರಾಜಸ್ಥಾನದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದ್ದು ಈ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ಕೇಳಿದ ಪ್ರಶ್ನೆಗೆ ಇರ್ಷಾದ್ ಈ ರೀತಿ ಪ್ರತಿಕ್ರಿಯಿಸಿದರು.

ಗೋರಕ್ಷರ ಹಲ್ಲೆಯಿಂದ ನಾವು ತಂದೆಯನ್ನು ಕಳಕೊಂಡೆವು. ಈಗ ನಾವು ಗೋಕಳ್ಳ ಸಾಗಾಟದ ಆರೋಪಿಗಳಾಗಿದ್ದೇವೆ. ರಾಜಸ್ತಾನದ ಹೊಸ ಕಾಂಗ್ರೆಸ್ ಸರಕಾರ ನಮ್ಮ ಮೇಲಿರುವ ಆರೋಪ ಪತ್ರವನ್ನು ಪುನಃ ಪರಿಶೀಲನೆ ನಡೆಸಿ ಹಿಂದಕ್ಕೆ ಪಡೆಯಬಹುದು ಎನ್ನುವ ನಿರೀಕ್ಷೆ ನನಗಿದೆ. ಸರಕಾರ ಬದಲಾದರೆ ನಮಗೆ ನ್ಯಾಯ ಸಿಗುವ ನಿರೀಕ್ಷೆಯಿತ್ತು ಆದರೆ ಹಾಗೆ ಸಂಭವಿಸಲಿಲ್ಲ ಎಂದು ಇರ್ಷಾದ್ ಹೇಳಿದರು.

ಕಳೆದ ವರ್ಷ ರಾಜಸ್ತಾನದ ಬಿಜೆಪಿ ಸರಕಾರ ತಯಾರಿಸಿದ ಆರೋಪ ಪಟ್ಟಿಯಲ್ಲಿ ಪೆಹ್ಲೂ ಖಾನ್‍ರ ಸಹಾಯಕರಾದ ಅಸ್ಮತ್, ರಫೀಖ್, ವಾಹನ ಚಾಲಕ ಅರ್ಜುನ್, ವಾಹನ ಮಾಲಕ ಜಗದೀಶ್ ಪ್ರಸಾದ್‍ರ ಹೆಸರು ಇತ್ತು. ಅಲ್ವಾರದ ಬೆಹರೂರ್ ಪೊಲೀಸರು ಹೊಸ ಆರೋಪಟ್ಟಿ ತಯಾರಿಸಿದ್ದರು.