ಅಮೆರಿಕದ ಬಗ್ಗೆ ಆತಂಕ ವ್ಯಕ್ತಪಡಿಸುವವರು ಕಟು ಚಳಿಯಲ್ಲಿ ರಸ್ತೆಗಿಳಿದ ರೈತರ ಕುರಿತು ನೆನೆಯಬೇಕು- ವಿಜೇಂದರ್ ಸಿಂಗ್

0
480

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.9: ಅಮೆರಿಕ ಕುರಿತು ಆತಂಕಗೊಳ್ಳುವವರು ದೇಶದ ರಸ್ತೆಯಲ್ಲಿ ಕಟು ಚಳಿಯಲ್ಲಿ ಪ್ರತಿಭಟಿಸುತ್ತಿರುವವರನ್ನು ನೆನೆದು ಆತಂಕಗೊಳ್ಳಬೇಕಿದೆ ಎಂದು ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಹೇಳಿದ್ದಾರೆ. ಅಲ್ಲಿ ಏನಾಗುತ್ತಿದೆ ಎಂದು ನೆನೆದು ಜನರು ಅಮೆರಿಕದ ಕುರಿತು ಆತಂಕ ಪಡುತ್ತಿದ್ದಾರೆ. ಆದರೆ ನಮ್ಮ ರೈತರು ಕಟು ಚಳಿಯಲ್ಲಿ ರಸ್ತೆಯಲ್ಲಿದ್ದಾರೆ. ಅವರ ಕುರಿತು ಆತಂಕಪಡಬೇಕಾಗಿದೆ ಎಂದು ವಿಜೇಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಪಾರ್ಲಿಮೆಂಟಿನ ಮೇಲೆ ದಾಳಿ ಮಾಡಿದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಲು ಮುಂದೆ ಬಂದ ಬೆನ್ನಿಗೆ ವಿಜೇಂದರ್ ಸಿಂಗ್‍ರ ಟ್ವೀಟ್ ಮಾಡಿದೆ. ಶಿಸ್ತಿನಿಂದ ಶಾಂತಿಪೂರ್ವಕವಾಗಿ ಅಧಿಕಾರ ಹಸ್ತಾಂತರ ನಡೆಬೇಕು. ಅಕ್ರಮ ಮಾರ್ಗದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬುಡಮೇಲುಗೊಳಿಸಲು ಬಿಡಬಾರದೆಂದು ಮೋದಿ ಟ್ವೀಟ್ ಮಾಡಿದ್ದರು. ಮೋದಿಯ ಪ್ರತಿಕ್ರಿಯೆಯನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಹಿತ ಕೆಲವರು ವ್ಯಂಗ್ಯವಾಡಿದ್ದರು.

ಕೇಂದ್ರ ಸರಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯಲ್ಲಿ ವಿಜೇಂದರ್ ಸಿಂಗ್ ಪಾಲುಗೊಂಡಿದ್ದರು. ಕರಾಳ ಕಾನೂನು ಹಿಂಪಡೆಯದಿದ್ದರೆ ತನಗೆ ಸಿಕ್ಕಿದ ಎಲ್ಲ ಉನ್ನತ ಕ್ರೀಡಾ ಪ್ರಶಸ್ತಿಗಳನ್ನು ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮರಳಿಸುವುದಾಗಿ ಘೋಷಿಸಿದ್ದರು. ಇದೇ ವೇಳೆ ರೈತರ ಎಂಟನೆಯ ಬಾರಿಯ ಚರ್ಚೆ ವಿಫಲವಾಗಿತ್ತು. ಕೃಷಿ ಕಾನೂನು ಹಿಂಪಡೆಯಲು ಕೇಂದ್ರ ಸರಕಾರ ಒಪ್ಪದ್ದರಿಂದ ಚರ್ಚೆ ವಿಫಲವಾಗಿತ್ತು.