ತೊಕ್ಕೊಟ್ಟು: ಮಾರುಕಟ್ಟೆಗೆ ಕಿಡಿಗೇಡಿಗಳಿಂದ ಬೆಂಕಿ: ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ವೆಲ್ಫೇರ್ ಪಾರ್ಟಿ ಆಗ್ರಹ

0
606

ಸನ್ಮಾರ್ಗ ವಾರ್ತೆ

ಉಳ್ಳಾಲ,ಜ.9: ಕಳೆದ 50 ವರ್ಷಗಳಿಂದ ತೊಕ್ಕೊಟ್ಟು ಒಳ ಪೇಟೆಯ ಪಂಚಾಯತ್ ಕಟ್ಟಡದಲ್ಲಿ ಮಾಂಸದ ವ್ಯಾಪಾರಿಗಳು ವ್ಯಾಪಾರ ನಡೆಸಿಕೊಂಡು ಬರುತಿದ್ದು ಪಂಚಾಯತ್ ಕಟ್ಟಡದ ಮರುನಿರ್ಮಾಣದ ವೇಳೆ ಉಳ್ಳಾಲ ನಗರ ಸಭೆಯು ತಾತ್ಕಾಲಿಕ ಶೆಡ್ಡ್ ಗಳನ್ನು ನೀರ್ಮಿಸಿ ಅಂಗಡಿಗಳನ್ನು ಸ್ಥಳಾಂತರಿಸಿತ್ತು. ಇದಕ್ಕೆ ರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದು ಇದರಿಂದ ವ್ಯಾಪಾರಿಗಳಿಗೂ ಹಾಗೂ ನಗರಸಭೆಗೂ ಅಪಾರ ನಷ್ಟ ಉಂಟಾಗಿರುತ್ತದೆ, ಈ ಕೃತ್ಯವನ್ನು ಎಸಗಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಅವರಿಂದಲೇ ನಷ್ಟ ಪರಿಹಾರ ನೀಡುವಂತೆ ಮಾಡಬೇಕು ಎಂದು ವೆಲ್ಫೇರ್ ಪಾರ್ಟಿ ಮಂಗಳೂರು ನಗರ ಸಮಿತಿ ಆಗ್ರಹಿಸಿದೆ.