ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಆ.2: ಹರಿಯಾಣ ಘರ್ಷಣೆಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ವಿಹಿಂಪ ಮತ್ತು ಜಜರಂಗದಳ ನಡೆಸಲಿರುವ ರ್ಯಾಲಿಯನ್ನು ತಡೆಯಬೇಕೆಂದು ಹಿರಿಯ ವಕೀಲ ಸಿ.ಯು. ಸಿಂಗ್ ಸುಪ್ರಿಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದು ತುರ್ತು ವಿಚಾರಣೆಗೆ ಆಗ್ರಹಿಸಿದ್ದಾರೆ.
ಜಸ್ಟಿಸ್ ಅನಿರುದ್ಧ ಬೊಸ್ರ ಮುಂದೆ ಅರ್ಜಿ ಸಲ್ಲಿಕೆಯಾಗಿದ್ದು ವಕೀಲ ಸಿ.ಯು. ಸಿಂಗ್ ಈ ಅರ್ಜಿಯಲ್ಲಿ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಆದರೆ ಅರ್ಜಿಯನ್ನು ಜಸ್ಟಿಸ್ ಬೋಸ್, ಚೀಫ್ ಜಸ್ಟಿಸ್ ಡಿವೈ ಚಂದ್ರಚೂಡರಿಗೆ ವಹಿಸಿ ಕೊಟ್ಟಿದ್ದಾರೆ. ನಾವು ಸಂವಿಧಾನ ಪೀಠದಲ್ಲಿರುವವರು, ತುರ್ತು ವಿಚಾರಣೆಗೆ ಬೇರೆಯೇ ವ್ಯವಸ್ಥೆಯನ್ನು ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದ ರಿಜಿಸ್ಟ್ರೀಯತ್ತ ಹೋಗಿ ಎಂದು ಚೀಫ್ ಜಸ್ಟಿಸ್ ಪ್ರತಿಕ್ರಿಯಿಸಿದರು.
ಬಜರಂಗದಳ ವಿಹಿಂಪ ದಿಲ್ಲಿಯಲ್ಲಿ ರ್ಯಾಲಿ ನಡೆಸುವುದಾಗಿ ಘೋಷಿಸಿದೆ. ದಿಲ್ಲಿ ನಿರ್ಮಾಣ್ ವಿಹಾರ್ ಮೆಟ್ರೊ ಸಮೀಪದಲ್ಲಿ ಬಜರಂಗದಳ , ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಗೆ ಕರೆ ನೀಡಿದೆ. ತದ ನಂತರ ಸಿ.ಯು. ಸಿಂಗ್ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದಾರೆ.












