ಹಥ್ರಾಸ್ ಸಂತ್ರಸ್ತೆಯ ಕುಟುಂಬದ ಮೇಲೆ ಯುಪಿ ಪೊಲೀಸರಿಂದ ದೌರ್ಜನ್ಯ: ಮೊಬೈಲ್ ಕಿತ್ತುಕೊಂಡು ಹೊರಹೋಗದಂತೆ ಬೆದರಿಕೆ

0
498

ಸನ್ಮಾರ್ಗ ವಾರ್ತೆ

ಲಕ್ನೊ,ಅ.2: ಹಥ್ರಾಸ್‍ನಲ್ಲಿ ಅತ್ಯಾಚಾರ, ಕೊಲೆ ಸಂತ್ರಸ್ತೆಯ ಕುಟುಂಬವನ್ನು ಪೊಲೀಸರು ದಿಗ್ಬಂಧನದಲ್ಲಿರಿಸಿದ್ದಾರೆ. ಕುಟುಂಬದವರ ಫೋನ್‍ಅನ್ನು ಪೊಲೀಸಧಿಕಾರಿಗಳು ಕಿತ್ತುಕೊಂಡಿದ್ದಾರೆ. ಮನೆಯಿಂದ ಹೊರಬರದಂತೆ ಬೆದರಿಕೆಯೊಡ್ಡಿದ್ದಾರೆ. ಮಾಧ್ಯಮಗಳಿಗೆ ಕುಟುಂಬದೊಂದಿಗೆ ಭೇಟಿಯಾಗಲು, ಮಾತಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಸಂಬಂಧಿಕರು ಮೊಬೈಲ್ ಫೋನ್‍ಗಳನ್ನು ಸ್ವಿಚ್ಛ್ ಆಫ್ ಮಾಡಿ ಇರಿಸಬೇಕೆಂದು ಬೆದರಿಸಲಾಗಿದ್ದು, ಬಾಲಕಿಯ ಮನೆಗೆ ಗ್ರಾಮಸ್ಥರನ್ನೂ ಕೂಡ ಹೋಗಲು ಬಿಡುತ್ತಿಲ್ಲ.

ಮನೆಯಿಂದ ಪೊಲೀಸರ ಕಣ್ತಪ್ತಿಸಿ ಹೊರಬಂದ ಹುಡುಗ ಪತ್ರಕರ್ತರ ಬಳಿಗೆ ಪೊಲೀಸರು ಫೋನ್ ಕಿತ್ತುಕೊಂಡರು. ಕುಟುಂಬದವರು ಮಾಧ್ಯಮಗಳೊಂದಿಗೆ ಮಾತಾಡಲು ಬಯಸುತ್ತಿದ್ದಾರೆ ಎಂದು ಆತ ತಿಳಿಸಿದ್ದಾನೆ. ಆದರೆ ಹುಡುಗ ಪತ್ರಕರ್ತರೊಂದಿಗೆ ಮಾತಾಡುತ್ತಿರುವುದನ್ನು ನೋಡಿದ ಪೊಲೀಸರು ಅಲ್ಲಿಂದ ಅವನನ್ನು ಓಡಿಸಿದ್ದಾರೆ.

ಸ್ಥಳದಲ್ಲಿ ನಿಷೇಧಾಜ್ಞೆಯಿದೆ. ಕುಟುಂಬ ಸದಸ್ಯರಿಂದ ಉನ್ನತ ಅಧಿಕಾರಿಗಳು ವಿವರವನ್ನು ಸಂಗ್ರಹಿಸುತ್ತಿದ್ದಾರೆ. ಆದ್ದರಿಂದ ಮಾಧ್ಯಮಗಳನ್ನು ಹೋಗಗೊಟ್ಟಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಕುಟುಂಬದವರಿಗೆ ಮಾಧ್ಯಮಗಳೊಂದಿಗೆ ಮಾತಾಡಲು ಇಚ್ಛೆಯಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರು. ಆದರೆ, ಕಿಲೋ ಮೀಟರ್ ದೂರದಲ್ಲಿ ಪತ್ರಕರ್ತರನ್ನು ತಡೆಹಿಡಿಯಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.