‘ಉತ್ತರ ಪ್ರದೇಶ ಸರಕಾರ ಇರುವುದೇ ಮಹಿಳಾ ಸುರಕ್ಷೆಗಾಗಿ’- ಸಿಎಂ ಯೋಗಿ ಆದಿತ್ಯನಾಥ್

0
1035

ಸನ್ಮಾರ್ಗ ವಾರ್ತೆ

ಲಕ್ನೊ,ಅ.2: ಉತ್ತರ ಪ್ರದೇಶ ಸರಕಾರ ಇರುವುದೇ ಹೆಣ್ಣು ಮಕ್ಕಳ, ಮಹಿಳೆಯರ ಸುರಕ್ಷೆ, ಆತ್ಮಾಭಿಮಾನ ಸಂರಕ್ಷಿಸುವುದಕ್ಕಾಗಿ ಎಂಬುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.

ಮಹಿಳೆಯರ ವಿರುದ್ಧ ಅಪರಾಧಗಳನ್ನು ಎಸಗುವವರನ್ನು ಮಾದರಿಯುತವಾಗಿ ಶಿಕ್ಷಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದರು.

ಹಥ್ರಾಸ್ ಸಾಮೂಹಿಕ ಅತ್ಯಾಚಾರ-ಹತ್ಯೆಯನ್ನು ವಿರೋಧಿಸಿ ದೇಶಾದ್ಯಂತ ಉತ್ತರ ಪ್ರದೇಶ ಸರಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿರುವುದಕ್ಕೆ ಪ್ರತ್ಯುತ್ತರವಾಗಿ ಅವರು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ನಮ್ಮ ತಾಯಂದಿರು, ಸಹೋದರಿಯರ ಸುರಕ್ಷೆ ಅಭಿಮಾನಕ್ಕೆ ಹಾನಿಮಾಡಬಹುದೆಂದು ಚಿಂತಿಸುವವರು ಕೂಡ ನಾಶವಾಗಲಿ. ಅವರಿಗೆ ನೀಡುವ ಶಿಕ್ಷೆ ಇತರರಿಗೆ ಒಂದು ಮಾದರಿಯಾಗಲಿದೆ. ಮಹಿಳಾ ಸುರಕ್ಷೆ ಸಬಲೀಕರಣಕ್ಕೆ ಉತ್ತರ ಪ್ರದೇಶ ಸರಕಾರ ಬದ್ಧವಾಗಿದೆ ಇದು ನಮ್ಮ ಭರವಸೆಯಾಗಿದೆ ಎಂದು ಯೋಗಿ ಆದಿತ್ಯನಾಥ್ ಟ್ವೀಟಿಸಿದ್ದಾರೆ.

ಹಥ್ರಾಸ್ ಘಟನೆಯಲ್ಲಿ ಯೋಗಿ ಸರಕಾರದ ವಿರುದ್ಧ ಯುಪಿ ಸರಕಾರ ನಾಚಿಕೆಗೇಡು, ಹೆಣ್ಣು ಮಕ್ಕಳನ್ನು ಸುಟ್ಟುಬಿಡಿ, ಹೆಣ್ಣುಮಕ್ಕಳನ್ನು ರಕ್ಷಿಸಿ ಮುಂತಾದ ಘೋಷಣೆಗಳು ದೇಶವ್ಯಾಪಿ ಕೇಳಿಸುತ್ತಿವೆ. ಹಥ್ರಾಸ್‍ನಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಯ ಮೃತದೇಹವನ್ನು ತಂದೆ-ತಾಯಿಯ ಒಪ್ಪಿಗೆಯಿಲ್ಲದೆ ಬಲವಂತದಿಂದ ಸಂಸ್ಕರಿಸಿದ ಉತ್ತರ ಪ್ರದೇಶ ಪೊಲೀಸರ ಕ್ರಮದ ವಿರುದ್ಧ ಮತ್ತು ರಾಜಕೀಯ ನಾಯಕರು ಮತ್ತು ಮಾಧ್ಯಮಗಳನ್ನು ಅಲ್ಲಿಗೆ ಹೋಗಗೊಡದಿರುವ ಕ್ರಮದ ವಿರುದ್ಧ ಕಟುವಾದ ಟೀಕೆಗಳು ಎದ್ದಿವೆ.