ಪಿತ್ರೊಡ ಹೇಳಿಕೆಗೆ ಪ್ರಧಾನಿ ಮೋದಿ ಪ್ರತ್ಯುತ್ತರ: ನೀವು ಸೇನೆಗೆ ಅವಮಾನ ಮಾಡುತ್ತಿದ್ದೀರಿ

0
834

ಹೊಸದಿಲ್ಲಿ, ಮಾ. 22: ಗಾಂಧಿ ಕುಟುಬದ ನಿಕಟವರ್ತಿ ಮತ್ತು ಇಂಡಿಯನ್ ಓವರ್‍ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೊಡ ಅವರು ಪುಲ್ವಾಮ ದಾಳಿಯ ಕುರಿತು ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ. ಪಿತ್ರೊಡಾರ ಹೇಳಿಕೆಯಿಂದ ಕಾಂಗ್ರೆಸ್‍ನ ಚಿಂತನೆ ಮತ್ತು ನಕಾರಾತ್ಮಕತೆ ಬಹಿರಂಗಗೊಂಡಿದೆ. ಇದು ಸೈನಿಕರ ಅಪಮಾನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಾವು ಭಯೋತ್ಪಾದಕರಿಗೆ ಅವರ ಭಾಷೆಯಲ್ಲೇ ಉತ್ತರ ಕೊಡುತ್ತೇವೆ. ಭದ್ರತಾಪಡೆಯ ವಿರುದ್ಧ ಮಾತಾಡುವುದು ವಿಪಕ್ಷಗಳಿಗೆ ಅಭ್ಯಾಸವಾಗಿ ಬಿಟ್ಟಿದೆ.

ಪುಲ್ವಾಮ ಭಯೋತ್ಪಾದನಾ ದಾಳಿಗೆ ಇಡೀ ಪಾಕಿಸ್ಥಾನವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದು ಪಿತ್ರೋಡ ಹೇಳಿದ್ದರು. ವಾಯು ದಾಳಿಯಲ್ಲಿ ಮೃತರಾದ ಭಯೋತ್ಪಾದಕರ ಸಂಖ್ಯೆಯನ್ನು ಕೂಡ ಎಷ್ಟು ಎಂದು ಅವರು ಪ್ರಶ್ನಿಸಿದ್ದರು. ಮುನ್ನೂರು ಮಂದಿ ಹತ್ಯೆಯಾಗಿದ್ದರೆ ಅದರ ಸಾಕ್ಷ್ಯವನ್ನು ಸರಕಾರ ಕೊಡಬೇಕೆಂದು ಹೇಳಿದ್ದರು. ಅಲ್ಲಿ ಎಷ್ಟು ಮಂದಿ ಸತ್ತರೆನ್ನುವುದನ್ನು ತಿಳಿಯುವ ಅಧಿಕಾರ ಜನರಿಗೆ ಇದೆ ಎಂದು ಪಿತ್ರೊಡ ಅಭಿಪ್ರಾಯ ವ್ಯಕ್ತಪಡಿಸಿದ್ದರು.