ಪ್ರಧಾನಿ ಮತ್ತು ವಿತ್ತ ಸಚಿವರು ಏನೋ ಮುಚ್ಚಿಡುತ್ತಿದ್ದಾರೆ: ಕೇಂದ್ರ ಸಚಿವ ರಾಣೆ

0
132

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: “ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೇಶದಿಂದ ಏನನ್ನು ಮರೆಮಾಚುತ್ತಿದ್ದಾರೆ” ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಜೂನ್ ಬಳಿಕ ಭಾರತ ಆರ್ಥಿಕ ಹಿಂಜರಿತವನ್ನು ಎದುರಿಸಬಹುದು ಎಂದು ಕೇಂದ್ರ ಸಚಿವರ ಈ ಹೇಳಿಕೆಗಳು ಸೂಚಿಸುತ್ತವೆ ಎಂದು ಹೇಳಿದ್ದಾರೆ.

ಭಾರತವು ಆರ್ಥಿಕ ಹಿಂಜರಿತವನ್ನು ಎದುರಿಸಿದರೆ, ಅದು ಜೂನ್ ಅನಂತರವೇ ಸಂಭವಿಸುತ್ತದೆ. ಆದರೆ ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಕೇಂದ್ರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಅಭಿವೃದ್ಧಿ ಶೀಲ ರಾಷ್ಟ್ರಗಳು ಈಗಾಗಲೇ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ” ಎಂದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಾರಾಯಣ ರಾಣೆ ಸೋಮವಾರ ಪುಣೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

2014 ರಿಂದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ನಾಶವಾಗಿದೆ. ಇದು 6 ತಿಂಗಳ ಅನಂತರ ಭಾರತದಲ್ಲಿ ಆರ್ಥಿಕ ಹಿಂಜರಿತವನ್ನು ಎದುರಿಸುವ ಮುನ್ಸೂಚನೆಯಾಗಿದೆ. ಪುಣೆಯಲ್ಲಿ ನಡೆದ ಜಿ20 ಸಮಾವೇಶದಲ್ಲಿ ರಾಣೆ ಈ ವಿಷಯ ತಿಳಿಸಿದ್ದಾರೆ. ಪ್ರಧಾನಿ ಮತ್ತು ವಿತ್ತ ಸಚಿವೆ ದೇಶದ ಜನರಿಂದ ಏನು ಮರೆಮಾಚುತ್ತಿದ್ದಾರೆ?” ಎಂದು ರಮೇಶ್ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. ‘ಪ್ರಧಾನಿ ಮತ್ತು ವಿತ್ತ ಸಚಿವರು ದೇಶದ ಜನರಿಂದ ಏನನ್ನೋ ಮರೆಮಾಚುತ್ತಿದ್ದಾರೆ’ ಎಂದು ಕೇಂದ್ರದ ಸಚಿವರೇ ಹೇಳುತ್ತಿರುವಾಗ ಸಹಜವಾಗಿ ಜನರಲ್ಲಿ ಆರ್ಥಿಕತೆಯ ಅಧಃಪತನದ ಆತಂಕ ಮೂಡಿದೆ.