ಕ್ರೈಸ್ತ ವಿರೋಧಿ ಬಿಜೆಪಿಗೆ ಮತ ನೀಡಬೇಡಿ: ಮೇಘಾಲಯ ಕಾಂಗ್ರೆಸ್ ಅಧ್ಯಕ್ಷ

0
202

ಸನ್ಮಾರ್ಗ ವಾರ್ತೆ

ಶಿಲ್ಲಾಂಗ್: ಕ್ರೈಸ್ತ ವಿರೋಧಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಮತ ನೀಡಬಾರದು ಎಂದು ಮೇಘಾಲಯ ಕಾಂಗ್ರೆಸ್ ಅಧ್ಯಕ್ಷ ವಿನ್ಸೆಂಟ್ ಕರೆ ಕೊಟ್ಟಿದ್ದಾರೆ. ಕ್ರೈಸ್ತರ ವಿರುದ್ಧ ಬಹಿರಂಗವಾಗಿ ಕೆಲಸ ಮಾಡುತ್ತಿರುವ ಈ ರಾಜಕೀಯ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಮತ ನೀಡಬಾರದು ಎಂದವರು ಸಂಘಟನೆಗಳ ಸಭೆಯೊಂದರಲ್ಲಿ ಕರೆ ನೀಡಿದ್ದಾರೆ.

ಕ್ರೈಸ್ತರ ಮೇಲೆ ಮತ್ತು ಚರ್ಚಿನ ಮೇಲೆ ದೇಶಾದ್ಯಂತ ನಡೆಯುತ್ತಿರುವ ಆಕ್ರಮಣಗಳು ಕ್ರೈಸ್ತರಲ್ಲಿ ಭಯದ ವಾತಾವರಣವನ್ನು ಬಿತ್ತಿದೆ. ಅಸ್ಸಾಂ ಮತ್ತು ಛತ್ತೀಸ್ಗಢದಲ್ಲಿ ಏನು ನಡೆದಿದೆ ಎಂಬುದನ್ನು ನಾವು ನೋಡಿದೆವು. ಅಸ್ಸಾಂನಲ್ಲಿ ಕ್ರೈಸ್ತರ ಮತ್ತು ಅವರ ಚರ್ಚುಗಳ ಗಣತಿ ನಡೆಸುವ ಕಾರ್ಯ ನಡೆಯುತ್ತಿದೆ ಎಂದು ಲೋಕಸಭಾ ಸದಸ್ಯರೂ ಆಗಿರುವ ವಿನ್ಸೆಂಟ್ ಹೇಳಿದ್ದಾರೆ