ಪ್ರಧಾನಿ ಮೋದಿ, ಶಾ‌’ರ ಸಚಿವರು ಶರದ್ ಪವಾರ್‌ಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ: ಸಂಜಯ್ ರಾವತ್

0
24

ಸನ್ಮಾರ್ಗ ವಾರ್ತೆ

ಮುಂಬೈ: ಕೆಲವು ಕೇಂದ್ರ ಸಚಿವರು ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್‌ಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ. ಮಹಾರಾಷ್ಟ್ರದ ರಾಜಕೀಯ ಬಿಕ್ಕಿಟ್ಟಿನ ಹಿನ್ನೆಲೆಯಲ್ಲಿ ಮಹಾ ವಿಕಾಸ್ ಅಘಾಡಿ ಸಖ್ಯವನ್ನು ರಕ್ಷಿಸಲು ಪ್ರಯತ್ನಿಸಿದರೆ ಜೀವವೇ ಅಪಾಯಕ್ಕೊಳಗಾದೀತು ಎಂಬ ರೀತಿಯಲ್ಲಿ ಬಿಜೆಪಿಯ ಒಬ್ಬ ಕೇಂದ್ರ ಸಚಿವ ಬೆದರಿಕೆ ಹಾಕಿದ್ದಾನೆ ಎಂದು ಅವರು ಹೇಳಿದರು.

ಸಖ್ಯ ಉಳಿದರೂ ಇಲ್ಲದಿದ್ದರೂ ಇಂತಹ ಮಾತುಗಳನ್ನು ಒಪ್ಪಲು ಆಗದು ಎಂದು ಅವರು ಹೇಳಿದರು. ಹೆಚ್ಚಿನ ರಾಜಕೀಯ ಬಿಕ್ಕಟ್ಟಿಗೆ ಮೋದಿ ಮತ್ತು ಅಮಿತ್ ಶಾ ಕಾರಣ ಎಂದು ರಾವತ್ ಹೇಳಿದರು.

ಇದೇ ವೇಳೆ ಬಿಜೆಪಿಯೊಂದಿಗೆ ಸರಕಾರ ರಚಿಸುವ ಪ್ರಯತ್ನವನ್ನು ಭಿನ್ನಮತೀಯ ನಾಯಕ ಏಕನಾಥ್ ಶಿಂಧೆ ತೀವ್ರಗೊಳಿಸಿದ್ದಾರೆ. ತನ್ನನ್ನು ವಿದಾನಸಭಾ ಪಕ್ಷದ ನಾಯಕನಾಗಿಸಬೇಕೆಂದು ಶಿಂಧೆ ರಾಜ್ಯಪಾಲರಿಗೂ ಡೆಪ್ಯುಟಿ ಸ್ಪೀಕರ್‌ರಿಗೂ ಗುರುವಾರ ರಾತ್ರೆ ಪತ್ರ ಬರೆದಿದ್ದಾರೆ. ಭರತ್ ಗೊಗಾವಾಲ್‌ರನ್ನು ಚೀಫ್ ವಿಪ್ ಗೊಳಿಸಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದರು.

ಉದ್ಧವ್ ಠಾಕ್ರೆ ಸರಕಾರ ಕೆಳಗಿಳಿಸಲಿರುವ ಶಾಸಕರ ಬಲ ತನಗಿದೆ ಎಂದು ಶಿಂಧೆ ಹೇಳುತ್ತಿದ್ದಾರೆ. ಆದರೆ ಇಂತಹ ಪ್ರಯತ್ನಗಳನ್ನು ತಡೆಯಲು ದೇಶದ ಕಾನೂನಾತ್ಮ ವಿಷಯಗಳು ಕೂಡ ಅನುಸರಿಸಬೇಕಾಗಿದೆ ಎಂದು ರಾವತ್ ಟೀಕಿಸಿದರು. ಭಿನ್ನರ ಕಡೆಯಿರುವ ಶಾಸಕರ ಸಂಖ್ಯೆ ಏರಿಕೆಯಾಗುತ್ತಿದೆ ಎಂಬುದಾಗಿ ಕೇಳಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.