ಎನ್‌ಎಸ್‌ಎ ಡೊವಲ್ ನಂತರ ಪ್ರಧಾನಿ ನರೇಂದ್ರ ಮೋದಿಯಿಂದ ಸೌದಿ ಅರೇಬಿಯಕ್ಕೆ ಭೇಟಿ ಸಾಧ್ಯತೆ- ವರದಿ

0
456

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.5: ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಸೌದಿ ಆಡಳಿತಗಾರರೊಂದಿಗೆ ಅವರು ಚರ್ಚೆ ನಡೆಸಲಿದ್ದಾರೆ. ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‍ರೊಂದಿಗೂ ಮೋದಿ ಚರ್ಚೆ ನಡೆಸುವರೆಂದು ತಿಳಿದು ಬಂದಿದೆ.
ಆದರೆ, ಇದಕ್ಕೆ ಸಂಬಂಧಿಸಿದ ಅಧಿಕೃತ ಘೋಷಣೆ ಹೊರಡಿಸಲಾಗಿಲ್ಲ.

ರಿಯಾದ್‍ನಲ್ಲಿ ನಡೆಯುವ ಹೂಡಿಕೆ ಸಂಗಮದಲ್ಲಿ ಮೋದಿ ಭಾಗವಹಿಸುವರು. ಈ ಹಿಂದೆ ಭಾರತದ ಸುರಕ್ಷಾ ಸಲಹೆಗಾರ ಅಜಿತ್ ಡೊವಲ್ ಸೌದಿ ಅರೇಬಿಯಕ್ಕೆ ಹೋಗಿಬಂದಿದ್ದರು. ಸೌದಿ ಅರೇಬಿಯದ ಅಧಿಕಾರಿಗಳೊಂದಿಗೆ ಡೊವಲ್ ಚರ್ಚಿಸಿದ್ದರು.

ಈ ತಿಂಗಳು ಕೊನೆಗೆ ನಡೆಯುವ ಮೋದಿ ಭೇಟಿಯ ಮೊದಲು ಡೊವಲ್ ಸೌದಿಗೆ ಹೋಗಿದ್ದರೆಂದು ವರದಿಗಳು ತಿಳಿಸಿದೆ. 2016ರಲ್ಲಿ ನರೇಂದ್ರ ಮೋದಿ ಸೌದಿ ಅರೇಬಿಯದಲ್ಲಿ ಸಂದರ್ಶನ ನಡೆಸಿದ್ದರು.