ಸನ್ಮಾರ್ಗ ವಾರ್ತೆ
ಬೆಂಗಳೂರಿನ ಆಯ್ರಾ ಸೋಶಿಯಲ್ (www.ayra.social) ವೆಬ್‌ಸೈಟ್’ನ ವತಿಯಿಂದ ಲೇಖನ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿತ್ತು. ಕನ್ನಡ ಹಿಂದಿ ಇಂಗ್ಲಿಷ್ ಮೂರು ಭಾಷೆಗಳ ಲೇಖನಗಳನ್ನು ಆಹ್ವಾನಿಸಿದ್ದು, ಬಂದಂತಹಾ ಲೇಖನಗಳಲ್ಲಿ ಉತ್ತಮವೆನಿಸಿದ ನಲ್ವತ್ತು ಲೇಖನಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿದ್ದರು. ಸ್ಪರ್ಧೆಯ ನಿಯಮಾನುಸಾರ ಮೂರೂ ಭಾಷೆಗಳ ಲೇಖನಗಳನ್ನು ಪರೀಶಿಲಿಸಿದ ತೀರ್ಪುಗಾರರು ಒಟ್ಟು ಆರು ಲೇಖನಗಳನ್ನು ಅತ್ಯುತ್ತಮವಾದುದು ಮತ್ತು ಉತ್ತಮವಾದುದೆಂದು ಪ್ರತ್ಯೇಕಿಸಿ ಆಯ್ಕೆ ಮಾಡಿರುತ್ತಾರೆ.
ಹಫ್ಸಾ ಬಾನು ಬೆಂಗಳೂರು ರವರ ಕನ್ನಡದ ಲೇಖನ ‘ಹೃದಯದ ಮಾತುಗಳು’ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡರೆ, ಸಾತ್ವಿಕ ಜನರತ್ನಂ-‘ದ ಕೊರೋನಾ ಎಕ್ಸ್‌ಪಿರಿಯೆನ್ಸ್'(ಇಂಗ್ಲಿಷ್) ದ್ವೀತಿಯ, ಜಯಾ ಸಂತೋಷ್-ಗೋಯಿಂಗ್ ಫ್ರಮ್ ಮಿ ಟು ಮೋಮ್-ಮೈ(ಇಂಗ್ಲಿಷ್) ತೃತೀಯ, ಹಾಗೂ ಸಮಾಧಾನಕರ ಬಹುಮಾನಕ್ಕೆ ಜಯಪ್ರಕಾಶ್- ‘ನೋವಿನ ಬೆಂಕಿಯಲ್ಲಿ ಬೆಂದರಳಿದ ಬಣ್ಣ – ವ್ಯಾನ್ ಗೊ(ಕನ್ನಡ)’, ರಿಷಬ್ ನೇಮಾ – ಅಪ್ನೆ ಮಸ್ಥಿಷ್ಕ್ ಕೊ ಸ್ವಸ್ಥ್ ರಖ್ನೇ ಮೇ ಯೇ ಪಾಯಿಂಟ್ ಕರೇಂಗೆ ಆಪ್ ಕಿ ಮದದ್'(ಹಿಂದಿ), ವರ್ಷ ರಾವ್ ‘ಪತ್ರೊಡೆ – ಎ ಟೇಲ್ ಆಫ್ ಕ್ಯುಲಿನರಿ ಮಾಸ್ಟರ್ ಪೀಸ್'(ಇಂಗ್ಲಿಷ್) ಅಯ್ಕೆಯಾದುವು.
ಮೊದಲ ಬಹುಮಾನ 10000ರೂ ನಗದು ಮತ್ತು ಸರ್ಟಿಫಿಕೇಟ್ ಹೊಂದಿದ್ದರೇ, ದ್ವಿತೀಯ 5000ರೂ ತೃತೀಯ 2000ರೂ ಹಾಗೂ ಸಮಾಧಾಕರ ಬಹುಮಾನ ಪಡೆದ ಮೂರು ಲೇಖನಗಳು ತಲಾ 1೦೦೦ರೂ ನಗದು ಹಾಗೂ ಸರ್ಟಿಫಿಕೇಟ್ ಗಳನ್ನು ಹೊಂದಿದ್ದವು.
ಕಾಕತಾಳೀಯವೆಂಬಂತೆ ಈ ಫಲಿತಾಂಶವು ಕನ್ನಡ ರಾಜ್ಯೋತ್ಸವದಂದೇ ಹೊರಬಿದ್ದಿದ್ದು ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿದಿದೆ.












