ಬೀದಿ ಬದಿಯ ತಳ್ಳುಗಾಡಿಯನ್ನು ಕೆಡವಿದ ಪೊಲೀಸ್ ಅಮಾನತು

0
3410

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 27: ದಿಲ್ಲಿಯಲ್ಲಿ ಬೀದಿ ಬದಿ ನಿಲ್ಲಿಸಿದ್ದ ತಳ್ಳುಗಾಡಿಯನ್ನು ಕೆಡವಿ ಹಾನಿಗೈದ ಪೊಲೀಸ್ ಕಾನ್ಸ್ ಟೇಬಲ್‍ನನ್ನು ಅಮಾನತಿನಲ್ಲಿರಿಸಲಾಗಿದೆ. ಲಾಕ್ ಡೌನ್ ಉಲ್ಲಂಘನೆ ಎಂದು ತರಕಾರಿಯ ಕೈಗಾಡಿಯನ್ನು ಮಗುಚಿ ಹಾಕಿ ನಾಶ ಮಾಡಿದ ಕಾನ್ಸ್ ಟೇಬಲ್ ರಾಜ್‍ಬೀರ್ ಅಮಾನತಿಗೊಳಗಾಗಿದ್ದಾನೆ. ಲಾಕ್ ಡೌನ್ ಪಾಲಿಸದ್ದಕ್ಕೆ ಈ ಕ್ರಮ ಕೈಗೊಂಡಿದ್ದೇನೆ ಎಂದು ಆತ ಸಮಾಜಾಯಿಸಿಕೆ ನೀಡಿದ್ದಾನೆ. ಬುಧವಾರ ಸಂಜೆ ರಂಜಿತ್ ನಗರದಲ್ಲಿ ಘಟನೆ ನಡೆದಿದ್ದು ಮಾಸ್ಕ್ ಮತ್ತು ಸಾಧಾರಣ ವೇಷ ಭೂಷಣದಲ್ಲಿ ಬಂದಿದ್ದ ವ್ಯಕ್ತಿ ಅಲ್ಲಿಂದ ಹೋಗಲು ಹೇಳುತ್ತಾರೆ. ಪ್ಲಾಸ್ಟಿಕ್ ಶೀಟ್‍ನ ಮುಚ್ಚಿದ್ದ ತರಕಾರಿ ಗಾಡಿಯನ್ನು ದೂಡಿಹಾಕಿ ಪುಡಿಗಟ್ಟುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ನಂತರ ನಡೆದ ತನಿಖೆಯಲ್ಲಿ ಈತ ಪೊಲೀಸ್ ಕಾನ್ಸ್ಟೇಬಲ್ ಎಂದು ಗೊತ್ತಾಗಿತ್ತು.

ರಾಜ್‍ಬೀರ್ ಅಲ್ಲಿದ್ದ ಪ್ರತಿಯೊಂದು ಗಾಡಿಗಳನ್ನು ದೂಡಿಹಾಕುತ್ತಿದ್ದ. ತರಕಾರಿ ರಸ್ತೆಯಲ್ಲಿ ಬಿದ್ದು ಹಾಳಾಗಿದ್ದವು. ಅಸಹಾಯಕರಾಗಿ ಮೂವರು ಇದನ್ನು ನಿಂತು ನೋಡುತ್ತಿದ್ದರು. ತರಕಾರಿ ಆವಶ್ಯಕ ವಸ್ತುಗಳ ಪಟ್ಟಿಯಲ್ಲಿ ಬರುತ್ತಿದ್ದುದರಿಂದ ಅವುಗಳ ಮಾರಾಟವನ್ನು ತಡೆಯುವ ಹಕ್ಕು ಪೊಲೀಸರಿಗಿಲ್ಲ. ದುಸ್ಸಾಹಸಕ್ಕಿಳಿದ ರಾಜ್‍ಬೀರ್ ನನ್ನು ಇಲಾಖೆ ಈಗ ಅಮಾನತುಗೊಳಿಸಿದೆ.