ಪಾಸಿಟಿವ್ ಸುದ್ದಿ: ದೇಶದ ಕೊರೋನಾ ಸೋಂಕಿತರ ಪೈಕಿ ಶೇ.19 ಮಂದಿ ಗುಣಮುಖ, ಆತಂಕ ಬೇಡ; ಕೇಂದ್ರ ಆರೋಗ್ಯ ಸಚಿವಾಲಯ

0
1274

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 30: ದೇಶದಲ್ಲಿ ಕೊರೊನಾ ಪೀಡಿತರಾಗಿದ್ದವರ ಸಂಖ್ಯೆ ಹೆಚ್ಚುತ್ತಿದ್ದರೂ ಗುಣಮುಖರಾಗುತ್ತಿರವವರ ಸಂಖ್ಯೆಯೂ ಹೆಚ್ಚುತ್ತಿದೆ. ರೋಗ ಪೀಡಿತರಲ್ಲಿ 92 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಲೆಕ್ಕ ಪ್ರಕಾರ ದೇಶದಲ್ಲಿ ಕೊರೊನಾ ಪೀಡಿತರಲ್ಲಿ ಶೇ. 19ರಷ್ಟು ಗುಣಮುಖರಾದಂತಾಯಿತು.

25 ಮಂದಿ ಮಹಾರಾಷ್ಟ್ರದಲ್ಲಿ , 21 ಮಂದಿ ಕೇರಳದಲ್ಲಿ ರೋಗದಿಂದ ಮುಕ್ತರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈವರಗೆ 27 ಮಂದಿ ಮೃತಪಟ್ಟಿದ್ದಾರೆ. ಇನ್ನು ದೇಶದಲ್ಲಿ 867 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಶೇ.10ರಷ್ಟು ಮಂದಿ ಗುಣಮುಖರಾದರು. ಇದು ಹೆಚ್ಚು ಆಶಾವಾದವನ್ನು ಹುಟ್ಟುಹಾಕಿದೆ. ಅಮೆರಿಕದಲ್ಲಿ 1.24 ಲಕ್ಷ ಮಂದಿಗೆ ಕೊರೊನಾ ಬಾಧಿಸಿದೆ. 3238 ಮಂದಿ ಗುಣಮುಖರಾಗಿದ್ದಾರೆ. ಭಾರತ, ಅಮೆರಿಕದಲ್ಲಿ ಸುಮಾರು ಒಂದೇ ಸಮಯದಲ್ಲಿ ಕೊರೊನಾ ಬಂದಿತ್ತು. ಅಮೆರಿಕದಲ್ಲಿ ಶೇ. 2.61 ಮಂದಿ ಮಾತ್ರ ರೋಗದಿಂದ ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.