ಸೌದಿಯಲ್ಲಿ ಅನಿರ್ಧಿಷ್ಟಾವಧಿವರೆಗೆ ಸಂಚಾರ ನಿಷೇಧ, ಸಾರ್ವತ್ರಿಕ ರಜೆ

0
1369

ಸನ್ಮಾರ್ಗ ವಾರ್ತೆ

ರಿಯಾದ್, ಮಾ. 30: ಕೊರೊನಾ ಪ್ರತಿರೋಧ ಹಿನ್ನೆಲೆಯಲ್ಲಿ ಸೌದಿ ಅರೇಬಿಯ ಸರಕಾರ ಅಂತಾರಾಷ್ಟ್ರೀಯ, ದೇಶದೊಳಗಿನ ಎಲ್ಲ ವಿಮಾನ ಯಾನ ರದ್ದುಪಡಿಸಿದೆ. ಸಾರಿಗೆ ಸಂಚಾರಕ್ಕೂ ನಿಷೇಧ ಬಿದ್ದಿದೆ. ಸರಕಾರಿ ಕ್ಷೇತ್ರ ಸಹಿತ ಘೋಷಿಸಿದ್ದ ಸಾರ್ವತ್ರಿಕ ರಜೆಯನ್ನು ಅನಿರ್ಧಿಷ್ಠಾವಧಿ ಕಾಲಕ್ಕೆ ವಿಸ್ತರಿಸಿ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಈ ತಿಂಗಳು 14ನೆ ತಾರೀಕಿನಿಂದ ಅಂತಾರಾಷ್ಟ್ರೀಯ ವಿಮಾನಗಳಿಗೆ ಎರಡು ವಾರಗಳ ನಿಯಂತ್ರಣ ಇತ್ತು. ಈ ತಿಂಗಳು 21ರಿಂದ ದೇಶೀಯ ವಿಮಾನಗಳಿಗೆ 14 ದಿವಸಗಳ ನಿಷೇಧ ಇತ್ತು.
ಅದರಂತೆ ಈ ತಿಂಗಳು 16 ತಾರೀಕಿನಿಂದ ಹದಿನಾರು ದಿವಸಕ್ಕೆ ರಜೆ ಘೋಷಿಸಲಾಗಿತ್ತು. ಇದನ್ನು ಕೂಡ ಅನಿರ್ಧಿಷ್ಟ ಕಾಲದವರೆಗೆ ಗೃಹ ಸಚಿವಾಲಯ ಮುಂದೂಡಿದೆ. ರವಿವಾರಕ್ಕೆ ಅಂತಾರಾಷ್ಟ್ರಿಯ ವಿಮಾನಗಳ ನಿಷೇಧ ಕೊನೆಗೊಳ್ಳಬೇಕಾಗಿತ್ತು. ಶನಿವಾರ ರಾತ್ರೆ ನಿಷೇಧವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದೆ. ಗಡಿಯಲ್ಲಿ ನೆರೆ ದೇಶಗಳಿಗೆ ಹೋಗದಂತೆ ಹೇರಿದ್ದ ಸಂಚಾರ ನಿಷೇಧ ಮುಂದುವರಿಯಲಿದೆ. ರೈಲು, ಬಸ್, ಟ್ಯಾಕ್ಸಿ ಮುಂದಿನ ಪ್ರಕಟಣೆಯನ್ನು ನೀಡುವವರೆಗೆ ಪುನರಾರಂಭವಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಖಾಸಗಿ ವಾಹನಗಳು, ಆಹಾರ ವಸ್ತುಗಳು ಸಹಿತ ತುರ್ತು ಸರಕು ಸಾಗಾಟ ನಡೆಸುವ ವಾಹನಗಳಿಗೆ ಆರೋಗ್ಯ ಸೇವೆಯ ವಾಹನಗಳಿಗೆ ಕಂಪೆನಿ ಕಾರ್ಮಿಕ ಬಸ್‍ಗಳಿಗೆ ಮಾತ್ರ ಅನುಮತಿ ಇದೆ. ಸೈನಿಕ ಸಚಿವಾಲಯ ಬಿಟ್ಟು ಉಳಿದ ಎಲ್ಲ ಸರಕಾರಿ, ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು, ಖಾಸಗಿ ಕ್ಷೇತ್ರದ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಅನಿರ್ಧಿಷ್ಠಾವಧಿಯಾಗಿ ಮುಂದುವರಿಯಲಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.