ಮದುವೆಯನ್ನು ಮುಂದೂಡಿ ಕರ್ತವ್ಯನಿರತರಾದ ಡಿವೈಎಸ್ಪಿ ಎಂ ಜೆ ಪೃಥ್ವಿ: ಭಾರೀ ಮೆಚ್ಚುಗೆ

0
903

ಸನ್ಮಾರ್ಗ ವಾರ್ತೆ

ಮಂಡ್ಯ ಏಪ್ರಿಲ್ 18- ಡಿವೈಎಸ್ಪಿ ಎಂ ಜೆ ಪೃಥ್ವಿ ಅವರು ತನ್ನ ವಿವಾಹವನ್ನು ಮುಂದೂಡುವ ಮೂಲಕ ಸುದ್ದಿಯಾಗಿದ್ದಾರೆ. ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಆಗಿರುವ ಪೃಥ್ವಿಯವರು ಏಪ್ರಿಲ್ ಐದರಂದು ಧಾರಾವಾಡದಲ್ಲಿ ಹಸೆಮಣೆಗೆ ಏರಬೇಕಾಗಿತ್ತು. ಏಪ್ರಿಲ್ 10 ರಂದು ಮೈಸೂರಿನಲ್ಲಿ ಅರತಕ್ಷತೆ ನಡೆಯಬೇಕಾಗಿತ್ತು. ದ್ಯಾಮಪ್ಪ ಅವರನ್ನು ವರಿಸಬೇಕಿದ್ದ ಅವರು ಆ ಕುರಿತಂತೆ ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿದ್ದರು.

ಆದರೆ ಮಳವಳ್ಳಿ ಪಟ್ಟಣದಲ್ಲಿ 10 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಈ ಸಂದರ್ಭದಲ್ಲಿ ಮದುವೆಗಿಂತ ಅವರು ಕರ್ತವ್ಯಕ್ಕೆ ಒತ್ತು ನೀಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರು ಕೂಡ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೃಥ್ವಿಯವರನ್ನು ಅಭಿನಂದಿಸಿ ಪೋಸ್ಟ್ ಹಾಕಿದ್ದಾರೆ.

ಇದೇವೇಳೆ, ವಿಜಯಪುರದ ಕಾನ್ಸ್ಟೆಬಲ್ ಒಬ್ಬರಿಗೆ ಕೊರೋನಾ ದೃಢಪಟ್ಟಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಹೇಳಿದ್ದಾರೆ.

ಇವರು ಮೊದಲೇ ಕ್ಯಾನ್ಸರ್ ರೋಗಿಯೂ ಆಗಿದ್ದು ರಜೆಯಲ್ಲಿದ್ದರು. ಆದರೆ ಕೊರೋನಾ ಪತ್ತೆಯಾಗುವುದಕ್ಕಿಂತ ಮೊದಲು ಅವರು ಪೊಲೀಸ್ ಕಚೇರಿಗೆ ಆಗಮಿಸಿದ್ದರಿಂದ ಅವರ ಸಂಪರ್ಕಕ್ಕೆ ಬಂದವರನ್ನು ಕೂಡ ಕ್ವಾರಂಟೈನ್ ಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.