ಕೈದಿಗಳ ಬಿಡುಗಡೆ: ಕತರ್ ಈಜಿಪ್ಟಿಗೆ ಕೃತಜ್ಞತೆ ಸಲ್ಲಿಸಿದ ಬೈಡನ್

0
406

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ನ.22: ಇಸ್ರೇಲ್ ಹಮಾಸ್ ನಡುವೆ ಕದನ ವಿರಾಮ ಮತ್ತು ಕೈದಿಗಳ ಬಿಡುಗೆ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ ಕತರ್ ಮತ್ತು ಈಜಿಪ್ಟ್ ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೃತಜ್ಞತೆ ಸಲ್ಲಿಸಿದ್ದಾರೆ.

ಹಮಾಸ್-ಇಸ್ರೇಲ್ ಒಪ್ಪಂದಕ್ಕೆ ನಿರ್ಣಾಯಕ ನೇತೃತ್ವ ವಹಿಸಿದ ಕತಾರ್ ನ ಶೇಖ್ ತಮೀಂ ಬಿನ್ ಹಮದ್ ಅಲ್‍ಥಾನಿ ಮತ್ತು ಈಜಿಪ್ಟ್ ಅದ್ಯಕ್ಷ ಅಬ್ದುಲ್ ಫತ್ತಾಹ್ ಅಲ್‍ಸಿಸಿಗೂ ಬೈಡನ್ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಒಪ್ಪಂದದ ಮೂಲಕ ಹೆಚ್ಚಿನ ಅಮೆರಿಕನ್ ಕೈದಿಗಳನ್ನು ನಮಗೆ ಬಿಡುಗಡೆಗೊಳಿಸಲು ಸಾಧ್ಯವಿದೆ. ಎಲ್ಲರ ಬಿಡುಗಡೆಗೆ ಪ್ರಯತ್ನವನ್ನು ಮುಂದುವರಿಸಲಾಗುವುದು ಎಂದು ಬೈಡನ್ ಹೇಳಿದರು.

ಹಮಾಸ್ ಕೈದಿಯಾಗಿಟ್ಟುಕೊಂಡವರನ್ನು ಬಿಡುಗಡೆಗೊಳಿಸುವ ಒಪ್ಪಂದಕ್ಕಾಗಿ ಬೇರೆಯೇ ಸ್ವಾಗತವನ್ನು ಅವರು ಕೋರಿದರು. ಒಪ್ಪಂದದಲ್ಲಿ ಸೂಚಿಸಿದ ಎಲ್ಲ ವಿಷಯಗಳನ್ನು ಪೂರ್ಣವಾಗಿ ಜಾರಿಗೊಳಿಸಲು ಅವರು ಆಗ್ರಹಿಸಿದರು.

ಕದನ ವಿರಾಮವನ್ನು ಬೆಂಬಲಿಸಿದ ಇಸ್ರೇಲ್ ಸರಕಾರ ಮತ್ತು ಪ್ರಧಾನಿ ನೆತನ್ಯಾಹುರನ್ನು ವೈಟ್ ಹೌಸ್ ಅಭಿನಂದಿಸಿತು.

ಗಾಝದಲ್ಲಿ ಕದನ ವಿರಾಮಕ್ಕೆ ಬಂದಿಗಳನ್ನು ಹಸ್ತಾಂತರಿಸುವ ಒಪ್ಪಂದಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಂಡಿದೆ ಎಂದು ಎರಡು ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಿದ ಕತರ್ ಈ ಹಿಂದೆಯೇ ತಿಳಿಸಿತ್ತು. ನಾಲ್ಕು ದಿವಸದ ಕದನ ವಿರಾಮವಿರುವುದು. ಅದು ಜಾರಿಗೊಳ್ಳುವ ಸಮಯ 24 ಗಂಟೆಗಳಲ್ಲಿ ಘೋಷಿಸಲಾಗುವುದು. ಕತರ್ ಮಧ್ಯಸ್ಥಿಕೆಯಲ್ಲಿ ಈಜಿಪ್ಟ್ ಅಮೆರಿಕದ ಸಹಾಯದೊಂದಿಗೆ ಇಸ್ರೇಲ್ ಹಮಾಸ್ ನಡುವೆ ಚರ್ಚೆ ನಡೆದಿದೆ.

ಗಾಝದಲ್ಲಿ ಕೈದಿಯಾಗಿಸಿದ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆಗೊಳಿಸುವುದಕ್ಕೆ ಬದಲಾಗಿ ಇಸ್ರೇಲ್ ಜೈಲುಗಳಲ್ಲಿ ಕೈದಿಯಾಗಿಟ್ಟ ಹಲವಾರು ಫೆಲಸ್ತೀನಿನ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆಗೊಳಿಸಲಾಗುವುದು. ತಾತ್ಕಾಲಿಕ ಕದನ ವಿರಾಮ ಅಲ್ಲದೆ, ಈ ದಿನಗಳಲ್ಲಿ ಗಾಝಕ್ಕೆ ಇಂಧನ, ಟ್ರಕ್‍ಗಳು ನೆರವಿನ ಸಮಾಗ್ರಿಗಳೊಂದಿಗೆ ಪ್ರವೇಶಿಸಲು ಬಿಡಲಾಗುವುದು. ಹಮಾಸ್ ಇಸ್ರೇಲ್ ಒಪ್ಪಂದದಲ್ಲಿ ಸಹಾಯ ಮಾಡಿದ ಈಜಿಪ್ಟಿಗೂ ಅಮೆರಿಕ ಮತ್ತು ಕತರ್ ಅಭಿನಂದಿಸಿದೆ.