ಒಂದು ತಿಂಗಳಲ್ಲಿ ಒಬ್ಬನೇ ಒಬ್ಬ ಒತ್ತೆಯಾಳು ಪತ್ತೆ ಮಾಡಲು ಸಾದ್ಯವಾಗಿಲ್ಲ; ಅಂತಿಮವಾಗಿ ಕದನ ವಿರಾಮಕ್ಕೆ ನೆತನ್ಯಾಹು ಶರಣು

0
21862

ಸನ್ಮಾರ್ಗ ವಾರ್ತೆ

ಟೆಲ್ ಅವಿವ್, ನ. 22: ಗಾಝದ ವಿರುದ್ಧ ಯುದ್ಧ ನರಮೇಧ ಒಂದುವರೆ ತಿಂಗಳು ನಡೆಸಿದರೂ ಹಮಾಸ್ ಇರಿಸಿಕೊಂಡಿರುವ 240 ಒತ್ತೆಯಾಳುಗಳಲ್ಲಿ ಒಬ್ಬನನ್ನು ಕಂಡು ಹುಡುಕಿ ಬಿಡುಗಡೆಗೊಳಿಸಲು ಸಾಧ್ಯವಾಗದೆ ನಾಚಿಕೆಗೆಟ್ಟ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾರ್ವಜನಿಕರ ಒತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ 50 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿ ಮುಖ ರಕ್ಷಿಸುವುದಕ್ಕಾಗಿ ಮುಂದೆ ಬಂದಿದ್ದಾರೆ. ಹೀಗೆ ಹಮಾಸ್‍ನೊಂದಿಗೆ ತಾತ್ಕಾಲಿಕ ಯುದ್ಧ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಸರಕಾರ ಶರಣಾಗಿದೆ.

ಹಮಾಸ್ ಬಂದಿಯಾಗಿಟ್ಟ ತಮ್ಮವರನ್ನು ಕರೆತರಲು ಇದು ಪವಿತ್ರ ಮತ್ತು ಪರಮೋನ್ನತವಾದ ದೌತ್ಯವಾಗಿದೆ ಎಂದು ನೆತನ್ಯಾಹು ಯುದ್ಧ ವಿರಾಮ ಒಪ್ಪಂದವನ್ನು ವಿಶ್ಲೇಷಿಸಿದ್ದಾರೆ. ಹಮಾಸ್‍ನೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ ನಂತರ ಅವರು ಇಸ್ರೇಲನ್ನುದ್ದೇಶಿ ಭಾಷಣ ಮಾಡುವಾಗ ಈ ರೀತಿ ವಿಶ್ಲೇಷಿಸಿದ್ದಾರೆ.

ಆದರೆ ಗಾಝದ ವಿರುದ್ಧ ಯುದ್ಧ ನಿಲ್ಲಿಸಲು ತಾನು ಬಯಸುವುದಿಲ್ಲ ಎಂದು ಹೇಳಿದರು. ಹಮಾಸ್ ಅನ್ನು ನಿರ್ಮೂಲನ ಮಾಡುವುದು ಒತ್ತೆಯಾಳುಗಳನ್ನು ಮರಳಿ ತರುವುದು, ಗಾಝ ಇನ್ನು ಇಸ್ರೇಲ್‍ಗೆ ಬೆದರಿಕೆ ಹಾಕುವುದಿಲ್ಲ ಎಂದು ಖಚಿತ ಪಡಿಸುವ ಗುರಿ ಈಡೇರುವವರೆಗೆ ಇಸ್ರೇಲ್ ಯುದ್ಧ ನಿಲ್ಲಿಸುವುದಿಲ್ಲ ಎಂದು ನೆತನ್ಯಾಹು ಹೇಳಿದರು.

ಬಂದಿಯಾಗಿಸಿದವರು ಎಲ್ಲರನ್ನೂ ಊರಿಗೆ ಮರಳಿ ಕರೆತರುವುದು ನಮ್ಮ  ಹೊಣೆಯಾಗಿದೆ ಎಂದು ಇಸ್ರೇಲ್ ಸರಕಾರ ತಿಳಿಸಿತು. ಈ ಉದ್ದೇಶ ಈಡೇರುವವರೆಗೆ ಮೊದಲ ಹಂತದ ರೂಪುರೇಷೆಯನ್ನು ಸರಕಾರ ಅಂಗೀಕರಿಸಿದೆ. ಇದರಂತೆ ಮಹಿಳೆಯರು ಮಕ್ಕಳ ಸಹಿತ 50 ಕೈದಿಗಳನ್ನು ನಾಲ್ಕು ದಿವಸದೊಳಗೆ ಬಿಡುಗಡೆಗೊಳಿಸುವುದು. ಈ ಸಮಯದಲ್ಲಿ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು. ಪ್ರತಿ ಹತ್ತು ಒತ್ತೆಯಾಳುಗಳನ್ನು ಇಸ್ರೇಲ್ ಬಿಡುಗಡೆಗೊಳಿಸುತ್ತದೆ. ಈ ಸಮಯದಲ್ಲಿ ಯುದ್ಧ ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು. ಪ್ರತೀ ಹತ್ತು ಕೈದಿಗಳನ್ನು ಬಿಡುಗಡೆಗೊಳಿಸುವುದಂತೆ ಒಂದು ದಿವಸ ಹೆಚ್ಚು ಸಮಯ ಯುದ್ಧ ವಿರಾಮ ಜಾರಿಗೆ ತರಲಾಗುವುದು ಎಂದು ಇಸ್ರೇಲ್ ಸರಕಾರ ತಿಳಿಸಿದೆ.

ಕದನ ವಿರಾಮ ಒಪ್ಪಂದದ ಪ್ರಧಾನ ನಿಬಂಧೆಗಳು
ಇಸ್ರೇಲಿನ ಜೈಲಿನಲ್ಲಿರುವ ಹತ್ತೊಂಬತ್ತು ವರ್ಷ ವಯಸ್ಸಿಗಿಂತ ಕೆಳ ವಯೋಮಾನದ 150 ಫೆಲಸ್ತೀನಿ ಮಕ್ಕಳು  ಮತ್ತು ಮಹಿಳೆಯರನ್ನು ಬಿಡುಗಡೆಗೊಳಿಸುವುದು.

ಕೈದಿಗಳಾಗಿ ಹಮಾಸ್ ಇಟ್ಟು ಕೊಂಡಿರುವ 50 ಮತ್ತು 19 ವರ್ಷದ ಕೆಳ ವಯೋಮನಾದ ಇಸ್ರೇಲಿನ ಮಕ್ಕಳು ಮತ್ತು ಮಹಿಳೆಯರನ್ನು ಬಿಡುಗಡೆಗೊಳಿಸುವುದು.

ಗಾಝ ಪಟ್ಟಿಯಲ್ಲಿ ಎಲ್ಲ ಪ್ರದೇಶದಲ್ಲಿ ಇಸ್ರೇಲ್ ಸೈನಿಕರನ್ನು ವಾಪಸು ಕರೆತರುವುದು. ಸೈನಿಕ ವಾಹನಗಳ ಸಂಚಾರ ನಿಲ್ಲಿಸುವುದು.

ವೈದ್ಯಕೀಯ, ಇಂದನ, ಆಹಾರ ವಿತರಣೆಗೆ ನೂರಾರು ಟ್ರಕ್‍ಗಳನ್ನು ಗಾಝಕ್ಕೆ ಕಳುಹಿಸುವುದು.

ದಕ್ಷಿಣ ಗಾಝದಲ್ಲಿ ನಾಲ್ಕು ದಿವಸಗಳ ಕಾಲ ಡ್ರೋನ್‍ಗಳನ್ನು ಕಳುಹಿಸುದಂತೆ ತಡೆಯುವುದು.

ಉತ್ತರ ಗಾಝದ ಪ್ರಾದೇಶಿಕ ಸಮಯ ಬೆಳಗ್ಗೆ ಹತ್ತು ಮತ್ತು ಸಂಜೆ 4ರ ನಡುವೆ ಪ್ರತೀದಿನ ಆರು ಗಂಟೆಗಳ ಕಾಲ ಡ್ರೋನ್ ಹಾರಟ ನಿಷಿದ್ಧ.

ಕದನ ವಿರಾಮದ ಸಮಯದಲ್ಲಿ ಗಾಝ ಪಟ್ಟಿಯಲ್ಲಿ ಇಸ್ರೇಲ್ ಯಾರನ್ನೂ ಆಕ್ರಮಿಸುವುದಿಲ್ಲ, ಬಂಧಿಸುವುದಿಲ್ಲ.

ಸಲಾಹುದ್ದೀನ್ ಸ್ಟ್ರೀಟ್‍ನಲ್ಲಿ ಸಂಚರಿಸುವ ಸ್ವಾಂತಂತ್ರ್ಯ ದೃಢಪಡಿಸುವುದು.