ಸನ್ಮಾರ್ಗ ವಾರ್ತೆ
ಶ್ರೀನಗರ,ಜೂ.26: ಜಮ್ಮು-ಕಾಶ್ಮೀರದ ಅನಂತನಾಗ್‍ನಲ್ಲಿ ಸುರಕ್ಷಾ ಜವಾನರ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಕೇಂದ್ರ ರಿಸರ್ವ್ ಪೊಲೀಸ್ ಪಡೆಯ ಯೋಧ ಮತ್ತು ಒಂದು ಮಗು ಮೃತರಾಗಿದ್ದಾರೆ.
ಅನಂತ್‌ನಾಗ್ ಬಿಜ್‍ಬೆಹರ ಪ್ರದೇಶದಲ್ಲಿ ಹೈವೇ ಪಟ್ರೋಲಿಂಗ್ ಮಾಡುತ್ತಿದ್ದ ಸಿಆರ್‌ಪಿಎಫ್ ತಂಡದ ಮೇಲೆ ಭಯೋತ್ಪಾದಕರು ದಾಳಿ ಮಾಡಿದರು. ಓರ್ವ ಸಿಆರ್‌ಪಿಎಫ್ ಯೋಧ ಮತ್ತು ಆರು ವರ್ಷದ ಸ್ಥಳೀಯ ಮಗು ಗಂಭೀರ ಗಾಯಗೊಂಡಿತ್ತು. ಇವರನ್ನು ಬಿಜ್‍ಬೆಹರದ ಆಸ್ಪತ್ರೆಗೆ ಕರೆದುಕೊಂಡು ಹೋದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿದ್ದಾರೆ.
ಈ ಹಿಂದೆ ಪೂಲ್ವಾಮ ಜಿಲ್ಲೆಯ ಅವಂತಿಪುರದ ತ್ರೋಲ್ ಏರಿಯದಲ್ಲಿ ನಡೆದ ಘರ್ಷಣೆಯಲ್ಲಿ ಭದ್ರತಾ ಪಡೆ ಮೂವರು ಭಯೋತ್ಪಾದಕರನ್ನು ಕೊಂದು ಹಾಕಿತ್ತು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












