ಸನ್ಮಾರ್ಗ ವಾರ್ತೆ-
ಲಕ್ನೊ, ಜ.7: ಉತ್ತರಪ್ರದೇಶ ಸರಕಾರದ ಕಾನೂನು ಅವ್ಯವಸ್ಥೆಯ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತೀವ್ರ ಟೀಕೆ ಮಾಡಿದರು. ಅಪರಾಧಿಗಳಿಗೆ ಧೈರ್ಯ ಸಿಗುತ್ತಿದೆ. ರಾಜ್ಯದಲ್ಲಿ ಆತಂಕದ ವಾತಾವರಣ ಇದೆ ಮತ್ತು ಮುಖ್ಯಮಂತ್ರಿ ಸರಕಾರವನ್ನು ಉಳಿಸುವ ಕಾರ್ಯದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು. ಪ್ರಯಾಗ್ ರಾಜ್ನಲ್ಲಿ ಆದಿತ್ಯವಾರ ಒಂದು ಕುಟುಂಬದೈವರು ಸದಸ್ಯರ ಹತ್ಯೆಯಾಗಿತ್ತು. ಅಪರಾಧಿಗಳು ಸೊರಾಂವ್ನಲ್ಲಿ ವಿಜಯಶಂಕರ್ ತಿವಾರಿಯವರ ಇಡೀ ಕುಟುಂಬವನ್ನು ಕೊಲೆ ಮಾಡಿದ್ದಾರೆ. ಸಂಪೂರ್ಣ ಆತಂಕದ ವಾತಾವರಣ ಇದೆ ಎಂದು ಪ್ರಿಯಾಂಕಾ ಹೇಳಿದರು.
ಕೆಲವು ದಿನಗಳ ಹಿಂದೆ ಮುಝಪ್ಫರ್ ನಗರದಲ್ಲಿ ಭಜನ್ ಗಾಯ ಅಜಯ್ ಪಾಠಕ್ರ ಇಡೀ ಕುಟುಂಬದ ಹತ್ಯೆಯಾಗಿತ್ತು. ವಿಫಲ ಸರಕಾರವನ್ನು ಉಳಿಸುವುದಕ್ಕಾಗಿ ಮುಖ್ಯಮಂತ್ರಿ ಮತ್ತು ಸಚಿವರು ಎಷ್ಟರವರೆಗೆ ಸುಳ್ಳಿನ ಆಶ್ರಯ ಪಡೆದಾರು. ಉತ್ತರ ಪ್ರದೇಶದಲ್ಲಿ ನಿರಂತರ ಕೊಲೆ ಕೃತ್ಯಗಳ ಸರಣಿ ನಡೆಯುತ್ತಿವೆ. ಅಪರಾಧಿಗಳು ಮನಬಂದಂತೆ ಕೊಲೆ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ಅಪರಾಧಿಗಳನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿಕೊಂಡ ಬಳಿಕ ಪ್ರಿಯಾಂಕಾ ಗಾಂಧಿ ಯೋಗಿ ಸರಕಾರದ ವಿರುದ್ಧ ಕಟು ಟೀಕಾಪ್ರಹಾರ ನಡೆಸುತ್ತಿದ್ದಾರೆ. ಉನ್ನಾವ್ ಅತ್ಯಾಚಾರ ಘಟನೆಯ ನಂತರ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಭಟನೆಯಲ್ಲಿ ನಡೆದ ಜೀವಹಾನಿಯ ಕುರಿತು ಹಲವು ಸಲ ಪ್ರಿಯಾಂಕ ಯೋಗಿ ಸರಕಾರವನ್ನು ಟೀಕಿಸಿದ್ದಾರೆ.












