ಸನ್ಮಾರ್ಗ ವಾರ್ತೆ-
ಟೆಹ್ರಾನ್, ಜ. 8: ಇರಾನ್‍ನ ಟೆಹ್ರಾನ್‍ನಲ್ಲಿ ಯುಕ್ರೇನ್ ಪ್ರಯಾಣಿಕ ವಿಮಾನ ಪತನವಾಗಿದೆ. ಪ್ರಯಾಣಿಕರು ವಿಮಾನ ಸಿಬ್ಬಂದಿ ಸಹಿತ 180 ಮಂದಿ ವಿಮಾನದಲ್ಲಿದ್ದರು. ಯುಕ್ರೇನ್ ಇಂಟರ್ ನಾಶನಲ್ ಏರ್‍ಲೈನ್ 752 ವಿಮಾನ ಟೆಹ್ರನ್‍ನ ರಾನಿಯ ಇಮಾಂ ಖಾಮ್‍ನಾಯಿ ವಿಮಾನ ನಿಲ್ದಾಣದ ಸಮೀಪ ಅಪಘಾತಕ್ಕೆ ತುತ್ತಾಗಿದೆ.
ಇಮಾಮ್ ಖಾಮ್‍ನಾಯಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ ಬೊಯಿಂಗ್ 737-800 ಜೆಟ್ ವಿಮಾನ ಟೆಹ್ರಾನ್‍ನ ಪರಾಂದಿ ಎಂಬಲ್ಲಿ ಪತನಗೊಂಡಿತು. ಅದು ಟೆಹ್ರಾನ್‍ನಿಂದ ಯುಕ್ರೇನ್ ರಾಜಧಾನಿ ಕಿವಿಯ ಬೊರಿಸ್ ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಬೆಳಗ್ಗೆ 5:15ಕ್ಕೆ ಘಟನೆ ನಡೆದಿದೆ. ವಿಮಾನ ಹೊರಡುವಾಗ ಒಂದು ಗಂಟೆ ತಡವಾಗಿತ್ತು. ವಿಮಾನ ಪತನಕ್ಕೆ ತಾಂತ್ರಿಕ ತಕರಾರು ಕಾರಣ ಎನ್ನಲಾಗಿದೆ. ವಿಮಾನ ಪತನಗೊಳ್ಳುತ್ತಿರುವ ವೀಡಿಯೊ ಇರಾನ್ ಸುದ್ದಿ ಸಂಸ್ಥೆ ಇಸ್ನಾ ಹೊರಬಿಟ್ಟಿದೆ.
نخستین ویدئو از سقوط هواپیمای اوکراینی اطراف شهریار pic.twitter.com/M3bZiLLryQ
— خبرگزاری ایسنا (@isna_farsi) January 8, 2020












