ಸನ್ಮಾರ್ಗ ವಾರ್ತೆ
ಕುದ್ರೋಳಿ: SIO ಮತ್ತು JIH ಕುದ್ರೋಳಿ ಘಟಕದ ದೀರ್ಘ ಕನಸಿನ ಕೂಸಾದ ಸಾರ್ವಜನಿಕ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರವನ್ನು ರವಿವಾರ ಉದ್ಘಾಟಿಲಾಯಿತು.
ಈ ಗ್ರಂಥಾಲಯವು ಎಲ್ಲಾ ಯುವ ಮನಸ್ಸುಗಳಿಗೆ ತಮ್ಮ ಜ್ಞಾನವನ್ನು ವೃದ್ಧಿಸುವ ನಿಟ್ಟಿನಲ್ಲಿ ಪ್ರಯೋಜನಕರವಾಗಳಿದೆ ಮತ್ತು ಅವರನ್ನು ಊಹಿಸಲಾಗದ ಪರಿಸರಕ್ಕೆ ಎಳೆದೊಯ್ಯುಲಿದೆ ಎಂದು ಆಶಿಸಲಾಗಿದೆ.
ಗ್ರಂಥಾಲಯವನ್ನು ಮಂಗಳೂರು ಶಾಂತಿ ಪ್ರಕಾಶನದ ಅಧ್ಯಕ್ಷರಾದ ಕೆ.ಎಂ. ಶರೀಫ್ ಸಾಬ್ ಮತ್ತು ಮುಖ್ಯ ಅತಿಥಿ ಸರ್ಫರಾಝ್ ಜೆ ಹಾಶಿಮ್ರವರು (ಪ್ರಾಂಶುಪಾಲರು, ಪಿ.ಎ. ಪ್ರಥಮ ದರ್ಜೆ ಕಾಲೇಜು, ಮನಃ ಚಿಕಿತ್ಸಕರು ಮತ್ತು ಮಾನಸಿಕ ತರಬೇತುದಾರರು) ಉದ್ಘಾಟಿಸಿದರು.
ಇತರ ಗಣ್ಯರಾದ ಶಂಶುದ್ದೀನ್(ಕಾರ್ಪೊರೇಟರ್, ಕುದ್ರೋಳಿ ವಾರ್ಡ್), ಮಕ್ಬೂಲ್ ಅಹ್ಮದ್(ಅಧ್ಯಕ್ಷರು, JIH ಕುದ್ರೋಳಿ), ಮುಝಹಿರ್ ಅಹ್ಮದ್(ಘಟಕ ಅಧ್ಯಕ್ಷ, SIO ಕುದ್ರೋಳಿ), ರಿಝ್ವಾನ್ ಅಝ್ಹರಿ (ಜಿಲ್ಲಾಧ್ಯಕ್ಷರು, ಎಸ್ ಐ ಓ ದಕ್ಷಿಣ ಕನ್ನಡ), ಸಲ್ಮಾನ್ ಮೊಯಿದ್ದೀನ್(ನಗರಾಧ್ಯಕ್ಷ, SIO ಮಂಗಳೂರು), ಹಿಬಾ ಫಾತಿಮಾ (ಸಹಾಯಕ ಕಾರ್ಯದರ್ಶಿ, ಜಿ.ಐ.ಒ. ದಕ್ಷಿಣ ಕನ್ನಡ), ಆಮಿನ ಮುಶೀರ(ರಾಜ್ಯ ಕಾರ್ಯದರ್ಶಿ, ಜಿ.ಐ.ಒ. ಕರ್ನಾಟಕ), ಹಲೀಮಾ ಆಲಿಯಾ (ವರ್ತುಲ ಸಂಚಾಲಕಿ, ಜಿ.ಐ.ಒ. ಕುದ್ರೋಳಿ) ಮತ್ತು ಜನಾಬ್ ಹಂಝ ಉಪಸ್ಥಿತರಿದ್ದರು.
ಸಮಗ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಎಂ. ಅಶ್ರಫ್ (ಅಧ್ಯಕ್ಷರು, JIH ಮಂಗಳೂರು) ರವರು ವಹಿಸಿದರು ಮತ್ತು ಗ್ರಂಥಾಲಯದ ಅಧಿಕ ಲಾಭವನ್ನು ಪಡೆಯಲು ಕಿವಿಮಾತು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಕಾರ್ಯಕ್ರಮವನ್ನು ನಿಯಾಫ್ ಅಹ್ಮದ್ ನಿರೂಪಿಸಿದರು.













