ವಿರೋಧ ಪಕ್ಷ ನಾಯಕರ ಭದ್ರತೆ ಹಿಂಪಡೆದ ಶಿಂಧೆ ಸರಕಾರ

0
337

ಸನ್ಮಾರ್ಗ ವಾರ್ತೆ

ಮುಂಬೈ: ವಿರೋಧ ಪಕ್ಷಗಳ ಹಿರಿಯ ನಾಯಕರ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ಹಿಂಪಡೆದಿದೆ. ವರದಿಗಳ ಪ್ರಕಾರ, ಕಾಂಗ್ರೆಸ್, ಎನ್‌ಸಿಪಿ ಮತ್ತು ಉದ್ಧವ್ ಪಕ್ಷದ 25 ನಾಯಕರ ಭದ್ರತೆಯನ್ನು ಹಿಂಪಡೆದಿದ್ದು, ಈ ಕುರಿತು ಸರ್ಕಾರ ಕಳೆದ ದಿನ ಆದೇಶ ಹೊರಡಿಸಿದೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಅವರ ಕುಟುಂಬದ ಭದ್ರತೆಯನ್ನು ಹಿಂಪಡೆದಿಲ್ಲ. ಉದ್ಧವ್ ಠಾಕ್ರೆ ಅವರ ಆಪ್ತ ಮಿಲಿಂದ್ ನಾವೇಕರ್ ಅವರಿಗೂ ವೈ ಪ್ಲಸ್ ಕೆಟಗರಿ ಭದ್ರತೆಯನ್ನು ನೀಡಲಾಗಿದೆ.

ಎನ್‌ಸಿಪಿ ನಾಯಕ ಶರತ್ ಪವಾರ್ ಮತ್ತು ಅವರ ಪುತ್ರಿ ಸುಪ್ರಿಯಾ ಸುಳೆ ಅವರ ಭದ್ರತೆಯನ್ನು ಉಳಿಸಿಕೊಳ್ಳಲಾಗಿದೆ ಮತ್ತು ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರ ಭದ್ರತೆಯನ್ನು ಇಜೆಡ್‌ನಿಂದ ವೈ ಪ್ಲಸ್‌ಗೆ ಇಳಿಸಲಾಗಿದೆ.

ನವಾಬ್ ಮಲಿಕ್, ಅನಿಲ್ ದೇಶಮುಖ್, ವಿಜಯ್ ವಡೆತಿವಾರ್, ಬಾಳಾಸಾಹೇಬ್ ಥೋರಟ್, ನಾನಾ ಪಟೋಲೆ, ಭಾಸ್ಕರ್ ಜಾಧವ್, ಸಾತೇಜ್ ಪಾಟೀಲ್, ಧನಜಯ್ ಮುಂಡೆ, ಸುನೀಲ್ ಕೇದಾರೆ, ನರಹರಿ ಸಿರ್ವಾಲ್ ಮತ್ತು ವರುಣ್ ಸರ್ದೇಸಾಯಿ ಅವರಿಗೆ ನೀಡಲಾದ ಭದ್ರತೆಯನ್ನು ಹಿಂಪಡೆಯಲಾಗಿದೆ.