ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದು ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಸಿಬಿಎಸ್‍ಇ ಟಾಪರ್ ಹನ್ಸಿಕಾ ಶುಕ್ಲ

0
507

ಹೊಸದಿಲ್ಲಿ,ಮೇ 6 : ಸಾಮಾಜಿಕ ಮಾಧ್ಯಮಗಳಿಂದ ದೂರ ನಿಂತು ಕಲಿಕೆಯತ್ತ ಗಮನ ಹರಿಸಿದ್ದು ಪಿಯುಸಿಯಲ್ಲಿ ಉನ್ನತ ಯಶಸ್ಸು ಪಡೆಯಲು ಸಾಧ್ಯವಾಯಿತು ಎಂದು ಸಿಬಿಎಸ್‍ಇ ಪರೀಕ್ಷಾ ಟಾಪರ್ ಗಾಝಿಯಾಬಾದಿನ ಹನ್ಸಿಕಾ ಶುಕ್ಲ ತಿಳಿಸಿದ್ದಾರೆ. ಸಿಬಿಎಸ್‍ಇ ಪರೀಕ್ಷೆಯಲ್ಲಿ ಟಾಪರ್ ಆಗಿದ್ದೀಯ ಎಂದು ತಾಯಿ ಕರೆ ಮಾಡಿ ತಿಳಿಸಿದಾಗ ನಂಬಲು ಕಷ್ಟವಾಯಿತು ಎಂದು ಗಾಝಿಯಾಬಾದಿನ ನಿವಾಸಿ ಗಾಝಿಯಾಬಾದ್ ಡಿಪಿಎಸ್ ಸ್ಕೂಲಿನ ಹನ್ನೆರಡನೆಯ ತರಗತಿ ವಿದ್ಯಾರ್ಥಿನಿ ಹನ್ಸಿಕಾ ಹೇಳಿದರು.

ಪರೀಕ್ಷೆ ತಯಾರಿಗೆ ಪ್ರತ್ಯೇಕ ಕೋಚಿಂಗ್ ಪಡೆದಿಲ್ಲ. ತಾನು ಪಡೆದ ಮಾರ್ಕುಗಳು ಸ್ವಯಂ ಕಲಿತು ಪಡೆದದ್ದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಲ್ಲ. ಓದಿ ಬೇಸತ್ತಾಗ ಸಂಗೀತ ಕೇಳುತ್ತಿದ್ದೆ. ಶಾಸ್ತ್ರೀಯ ಸಂಗೀತ, ಸ್ವಲ್ಪ ಬಾಲಿವುಡ್ ಸಂಗೀತ, ಇಂಗ್ಲಿಷ್ ಹಾಡುಗಳನ್ನು ಕೇಳುತ್ತಿದ್ದೆ. ಆಟದಲ್ಲಿ ಆಸಕ್ತಿಯಿದೆ ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್‍ಗಳ ವೀಡಿಯೊ ನೋಡುತ್ತೇನೆ. ಆದರೆ ಪರೀಕ್ಷೆಗೆ ಹತ್ತಿರದ ಮೂರು ನಾಲ್ಕು ತಿಂಗಳು ಇವೆಲ್ಲವನ್ನೂ ತೊರೆದೆ ಎಂದು ಹನ್ಸಿಕಾ ಹೇಳಿದರು. ಹಿಸ್ಟರಿ, ಪೊಲಿಟಿಕಲ್ ಸೈನ್ಸ್, ಸೈಕಾಲಜಿ, ಹಿಂದೂಸ್ಥಾನಿ ವೋಕಲ್ಸ್‌ಗೆ ನೂರಕ್ಕೆ ನೂರು ಅಂಕವನ್ನು ಹನ್ಸಿಕಾ ಗಳಿಸಿದ್ದಾರೆ. ಇಂಗ್ಲಿಷ್‍ನಲ್ಲಿ 100ರಲ್ಲಿ 99 ಅಂಕ ಪಡೆದಿದ್ದಾರೆ. ಹನ್ಸಿಕಾರ ತಾಯಿ ಗಾಝಿಯಾಬಾದ್ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ತಂದೆ ರಾಜ್ಯ ಸಭಾ ಕಾರ್ಯದರ್ಶಿಯಾಗಿದ್ದಾರೆ.