ಪುಣೆ ಉತ್ಸವದಲ್ಲಿ ಸ್ಫೋಟ ನಡೆಸಲು ಸನಾತನ್ ಸಂಸ್ಥಾ ಸಂಚು: ಪೊಲೀಸ್ ಹೇಳಿಕೆ

0
818

ಮುಂಬೈ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಹಿಂದೂ ಬಲಪಂಥೀಯ ಗುಂಪಾದ ಸನಾತನ್ ಸಂಸ್ಥಾದ ಐವರನ್ನು ಇತ್ತೀಚೆಗೆ ಬಂಧಿಸಿತ್ತು. ಪುಣೆಯಲ್ಲಿ ನಡೆಯುವ ಎಲೆಕ್ಟ್ರಾನಿಕ್ ಡ್ಯಾನ್ಸ್ ಉತ್ಸವದ ವೇಳೆ ಸ್ಫೋಟ ನಡೆಸಲು ಸನಾತನ್ ಸಂಸ್ಥಾ ಸಂಚು ನಡೆಸಿತ್ತೆಂಬುದಾಗಿ ನಿಗ್ರಹ ದಳವು ತಿಳಿಸಿದೆ.

ನಲ್ಲಸೋಪರ, ಪುಣೆ ಹಾಗೂ ಜಲ್ನಾದಿಂದ ಈ ಐವರು ಆರೋಪಿಗಳನ್ನು ಅಕ್ರಮ ಶಸ್ತ್ರಾಸ್ರ ಸಂಗ್ರಹದ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಐವರು ಆರೋಪಿಗಳಲ್ಲಿ ವೈಭವ್ ರಾವತ್, ಶರದ್ ಕಲಸ್ಕರ್, ಸುಧಾನ್ವಾ ಗೊಂದಲೇಕರ್ ಮತ್ತು ಶ್ರೀಕಾಂತ್ ಪಂಗಾರ್ಕರ್‍ರನ್ನು ಕಾನೂನು ಬಾಹಿರ ಚುಟುವಟಿಕೆಗಳ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ ಎಂದು ನಿಗ್ರಹ ದಳವು ತಿಳಿಸಿದೆ.

ಈ ಸಂದರ್ಭದಲ್ಲಿ ಗೊಂದಲೇಕರ್ ಹಾಗೂ ರಾವತ್ 2017ರಲ್ಲಿ ಪುಣೆಯಲ್ಲಿ ನಡೆದ ಮ್ಯೂಸಿಕ್ ಫೆಸ್ಟಿವಲ್ ವೇಳೆ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು. ಆರೋಪಿಗಳ ಹೇಳಿಕೆಯಂತೆ ‘ಈ ಉತ್ಸವವು ಹಿಂದೂ ಸಂಸ್ಕೃತಿಗೆ ವಿರುದ್ಧವಾದುದೆಂದು’ ಹೇಳಿಕೆ ನೀಡಿದ್ದರು.

ಸನ್‍ಬರ್ಗ್ ಮ್ಯೂಸಿಕ್ ಫೆಸ್ಟಿವಲ್ 2015ರ ವರೆಗೆ ಗೋವಾದಲ್ಲೇ ನಡೆಯುತ್ತಿತ್ತು. ಆದರೆ 2016ರಲ್ಲಿ ಅದನ್ನು ಪುಣೆಗೆ ಸ್ಥಳಾಂತರಿಸಲಾಯಿತು.