ಕಸ್ಗಂಜ್: ಉತ್ತರ ಪ್ರದೇಶದ ಪೊಲೀಸರು ಹಿಂದೂಗಳನ್ನು ರಕ್ಷಿಸಿ ಮುಸ್ಲಿಮರನ್ನು ಬಂಧಿಸಿದರು: ಅಧ್ಯಯನ ವರದಿ

0
1300

ಉತ್ತರ ಪ್ರದೇಶ: ಕಸ್ಗಂಜ್‍ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿತ ಬೈಕ್ ರ್ಯಾಲಿಯ ವೇಳೆ ಗಲಭೆಯು ನಡೆಯಿತು. ಈ ಘಟನಾವಳಿಯ ಕುರಿತು ಮೂರು ನಾಗರಿಕ ಹಕ್ಕುಗಳ ಗುಂಪುಗಳು, ಎರಡು ಅಮೇರಿಕಾ ಮೂಲದ ಗುಂಪುಗಳು ಹಾಗೂ ಲಂಡನಿನ ಒಂದು ನಾಗರಿಕ ಗುಂಪು ಅಧ್ಯಯನ ವರದಿಯೊಂದನ್ನು ಬಿಡುಗಡೆಗೊಳಿಸಿದೆ.

ಘಟನಾವಳಿಗಳ ಕುರಿತು ಮತ್ತು ತದನಂತರದ ಬೆಳವಣಿಗೆಗಳ ಕುರಿತು ನಡೆಸಲಾದ ಈ ಅಧ್ಯಯನ ವರದಿಯಲ್ಲಿ “ದೆಹಲಿಯಿಂದ 220 ಕಿಲೋ ಮೀಟರ್ ದೂರದಲ್ಲಿರುವ ಒಂದು ಪಟ್ಟಣದಲ್ಲಿ ಚಂದನ್ ಗುಪ್ತಾ ಎಂಬ ವ್ಯಕ್ತಿಯು ಗುಂಡು ಹಾರಿಸುವುದರೊಂದಿಗೆ ದಹನ ಮತ್ತು ವಿದ್ವಂಸಕ ಕೃತ್ಯಗಳು ಸಂಭವಿಸಿವೆ” ಎಂದಿದೆ.

21 ಪುಟಗಳ ಸವಿವರ ವರದಿಯನ್ನು ಈ ಗುಂಪುಗಳು ತಯಾರಿಸಿದ್ದು ನಡೆದ ಘಟನಾವಳಿಗಳ ಇಂಚಿಂಚು ಪ್ರಕ್ರಿಯೆಗಳನ್ನು ಉಲ್ಲೇಖಿಸಿವೆಯಲ್ಲದೇ ಪೊಲೀಸರು ಯಾವ ರೀತಿ ಈ ಘಟನೆಯನ್ನು ಮುಸ್ಲಿಮರ ತಲೆಗೆ ಕಟ್ಟಿ ಹಿಂದೂಗಳನ್ನು ಸಂರಕ್ಷಿಸಿದರು ಎಂಬುದನ್ನು ತಿಳಿಸಿದೆ.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿ, ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್, ನ್ಯೂರ್ಯಾಕಿನ ಯುನೈಟೆಟ್ ಆಗೆನ್ಸ್ಟ್ ಹೇಟ್, ಇಂಡಿಯನ್ ಅಮೇರಿಕನ್ ಮುಸ್ಲಿಮ್ ಕೌನ್ಸಿಲ್-ವಾಷಿಂಗ್‍ಟನ್ ಡಿಸಿ ಹಾಗೂ ಲಂಡನಿನ ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್‍ಗಳು ಕಸ್‍ಗಂಜ್‍ನಲ್ಲಿ ನಡೆದ ಘಟನಾವಳಿಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿವೆ.

ಉ.ಪ್ರದೇಶದ ಪೊಲೀಸರು “ಈ ಘಟನಾವಳಿಯು ಬೈಕ್ ರ್ಯಾಲಿಯನ್ನು ಕೈಗೊಳ್ಳುತ್ತಿದ್ದ ಹಿಂದೂಗಳ ಮೇಲೆ ಮುಸ್ಲಿಮರು ತಡೆಯೊಡ್ಡುವುದರೊಂದಿಗೆ ಸಂಭವಿಸಿತು” ಎಂದು ಹೇಳಿದ್ದು ಒಬ್ಬ ಮುಸ್ಲಿಮ್ ವ್ಯಕ್ತಿ ಗುಂಡು ಹಾರಿಸುವುದರೊಂದಿಗೆ ವಿಧ್ವಂಸಕ ಕೃತ್ಯಗಳು ನಡೆದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 28 ಜನ ಮುಸ್ಲಿಮರನ್ನು ಎರಡೇ ವಾರಗಳಲ್ಲಿ ಬಂಧಿಸಲಾಯಿತು” ಎಂದಿದೆ.

ಈ ಪ್ರಕರಣವನ್ನು ಉತ್ತರ ಪ್ರದೇಶದ ಪೊಲೀಸರೇ ತಿರುಚಿ ಹಾಕಿದ್ದು ಹಿಂದೂಗಳನ್ನು ಸಂರಕ್ಷಿಸಿ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂದು ನಾಗರಿಕ ಗುಂಪುಗಳು ತಮ್ಮ ಅಧ್ಯಯನ ವರದಿಯಲ್ಲಿ ತಿಳಿಸಿವೆ.