ಹಜ್ ಯಾತ್ರಿಕರ ಮೇಲಿರುವ ನಿಷೇಧವನ್ನು ಸಂಪೂರ್ಣ ತೆರವುಗೊಳಿಸುವಂತೆ ಕತರ್‌ನಿಂದ ಆಗ್ರಹ

0
678

ದೋಹಾ,ಮೇ 11: ಕತರ್ ಹಜ್ ಯಾತ್ರಿಕರ ಮೇಲೆ ಸೌದಿ ಅರೇಬಿಯಾ ಹೇರಿದ ನಿಷೇಧವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕೆಂದು ಕತರ್ ಆಗ್ರಹಿಸಿದೆ. ಕತರ್‍‌ನಿಂದ ಹಲವು ಹಜ್ ಯಾತ್ರಿಕರಿಗೆ ಪವಿತ್ರ ಸ್ಥಳ ಸಂದರ್ಶಿಸದಂತೆ ಸೌದಿ ನಿಷೇಧ ಹೇರಿದೆ. ಇತರ ದೇಶದ ಯಾತ್ರಿಕರಿಗೆ ನೀಡುತ್ತಿರುವ ಸೌಕರ್ಯಗಳನ್ನು ತಮಗೂ ನೀಡಬೇಕಾಗಿದೆ ಎಂದು ಕತರ್ ಎಂಡೋವ್‍ಮೆಂಟ್ ಇಸ್ಲಾಮಿಕ್ ಅಫೇರ್ಸ್ ಸಚಿವಾಲಯ ಸೌದಿಯ ಅಧಿಕಾರಿಗಳಿಗೆ ತಿಳಿಸಿದೆ. ವಿವಿಧ ಗಲ್ಪ್ ದೇಶಗಳಿಂದ ಬರುವ ಕತರ್ ಪ್ರಜೆಗಳೊಂದಿಗೆ ಸೌದಿ ತಾರತಮ್ಯ ಧೋರಣೆ ತಳೆದಿದ್ದು, ಇದನ್ನು ಕೊನೆಗೊಳಿಸಬೇಕೆಂದು ಸಚಿವಾಲಯ ಆಗ್ರಹಿಸಿದೆ. ರಮಝಾನ್‍ನಲ್ಲಿ ಉಮ್ರ ಮಾಡಲು, ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಕತರ್ ಪ್ರಜೆಗಳು ಬರುತ್ತಾರೆ. ಸೌದಿ ಅರೇಬಿಯ ಇದಕ್ಕೆ ನಿಷೇಧ ಹೇರಿದೆ. ಕತರ್ ವಿರುದ್ಧ ಸೌದಿ ಅರೇಬಿಯ ಸಹಿತ ಕೊಲ್ಲಿ ದೇಶಗಳು ನಿಷೇಧ ಹೇರಿದ ನಂತರ ತಾರತಮ್ಯದಿಂದ ವರ್ತಿಸಲಾಗುತ್ತಿದೆ ಎಂದು ಕತರ್ ಆರೋಪಿಸಿದೆ.