ಗುಜರಾತ್ ರೈತರ ವಿರುದ್ಧ ಮೊಕದ್ದಮೆಗಳನ್ನು ಹಿಂಪಡೆದ ಪೆಪ್ಸಿಕೊ

0
481

ಅಹ್ಮದಾಬಾದ್,ಮೇ 11: ಖಾದ್ಯ ಮತ್ತು ಪೇಯ ತಯಾರಿಯ ಬಹುರಾಷ್ಟ್ರೀಯ ಕಂಪೆನಿ ಪೆಪ್ಸಿಕೊ ಇಂಡಿಯಾ ಶುಕ್ರವಾರ ಗುಜರಾತ್‍ನ ಒಂಬತ್ತು ರೈತರ ವಿರುದ್ಧ ಹೂಡಿದ್ದ ಮೊಕದ್ದಮೆಗಳನ್ನು ವಾಪಸು ಪಡೆದುಕೊಂಡಿದೆ. ರೈತರ ವಿರುದ್ಧ ಕಂಪೆನಿಯ ವಿಶೇಷಾಧಿಕಾರವಿದ್ದ ಆಲೂಗಡ್ಡೆ ಹೊಲ ಉತ್ತಿದ್ದಕ್ಕಾಗಿ ಕೇಸು ಹಾಕಿತ್ತು. ಒಂದು ವಾರದ ಹಿಂದೆ ಬನಾಸ್‍ಕಾಂಟ ಜಿಲ್ಲೆಯ ಇಬ್ಬರು ರೈತರ ವಿರುದ್ಧ ಡೇಸಾ ವಾಣಿಜ್ಯ ನ್ಯಾಯಾಲಯದಲ್ಲಿ ಪೆಪ್ಸಿ ಪ್ರಕರಣ ದಾಖಲಿಸಿತ್ತು. ರೈತ ಪರ ವಕೀಲ ಆನಂದ್ ಯಾಗ್ನಿಕ್ ಪತ್ರಿಕಾ ಗೋಷ್ಠಿಯಲ್ಲಿ ಕಂಪೆನಿಯು ರೈತರ ವಿರುದ್ಧ ಮೊಕದ್ದಮೆಯನ್ನು ವಾಪಸು ಪಡೆದಿರುವುದನ್ನು ತಿಳಿಸಿದರು. ಒಂಬತ್ತು ರೈತರ ವಿರುದ್ಧ ಇದ್ದ ಎರಡು ಪ್ರಕರಣಗಳು ಇವುಗಳಲ್ಲಿ ಸಾಬರ್‍ಕಾಂತದ ನಾಲ್ಕು ಮತ್ತು ಅರವಲ್ಲಿಯ ಐದು ಪ್ರಕರಣಗಳು ಸೇರಿವೆ. ಇವುಗಳನ್ನು ಬಹುರಾಷ್ಟ್ರೀಯ ಕಂಪೆನಿ ವಾಪಸು ಪಡೆದಿದ್ದು, ಇದು ರೈತರಿಗೆ ಸಂದ ಜಯವೆಂದು ತಿಳಿಸಿದರು.