ಸನ್ಮಾರ್ಗ ವಾರ್ತೆ
ಮಂಡ್ಯ: ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಆರ್ ಅಶೋಕ್ ರನ್ನು ನೇಮಕ ಮಾಡಲಾಗಿದೆ. ಸಚಿವ ಗೋಪಾಲಯ್ಯ ಅವರನ್ನು ಬದಲಿಸಿ ಈ ನೇಮಕಾತಿ ಮಾಡಲಾಗಿದೆ. ಅಶೋಕ್ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಅಲ್ಲದೇ, ಜಿಲ್ಲೆಯವರೇ ಆದ ನಾರಾಯಣ ಗೌಡರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ಕೆಲವು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಮಂಡ್ಯದ ವಿವಿ ರಸ್ತೆ, ಸುಭಾಷ್ ರಸ್ತೆ ಗೋಡೆ ಮೇಲೆ ಹಾಗೂ ಜಿಲ್ಲೆಯ ಮದ್ದೂರು ಸೇರಿದಂತೆ ಹಲವಡೆ ‘ಗೋ ಬ್ಯಾಕ್ ಆರ್.ಅಶೋಕ್’ ಎಂಬ ಭಿತ್ತಿಪತ್ರ ಅಂಟಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಅಶೋಕ್ ಮಂಡ್ಯ ಬಿಟ್ಟು ಹೋಗಿ ಎಂದು ಬರೆದಿರುವ ಪೋಸ್ಟರ್ಗಳಲ್ಲಿ ಬಿಜೆಪಿಯ ಚಿಹ್ನೆಗಳಿವೆ.
ಸಚಿವ ಆರ್.ಅಶೋಕ್ರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕಗೊಳಿಸಲಾಗಿದ್ದು, ಸಚಿವರ ಬದಲಾವಣೆಗೆ ಮಂಡ್ಯ ಜಿಲ್ಲೆಯ ಬಿಜೆಪಿ ಮುಖಂಡರಿಂದಲೇ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ನಿರ್ದೇಶನದಂತೆ ಅಶೋಕ್ರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನಾಗಿಸಲಾಗಿದೆ.












