ರಾಮಮಂದಿರ: ವಿಹಿಂಪ ಸಭೆಗೆ ಅಯೋಧ್ಯೆಯ ಸಾಧುಗಳ ಬಹಿಷ್ಕಾರ

0
892

ಧೀರೇಂದ್ರ ಕೆ ಝಾ 

ಕನ್ನಡಕ್ಕೆ: ಆಯಿಶತುಲ್  ಅಫೀಫಾ 

ಆಂಗ್ಲ ಮೂಲ: ಕಾರವಾನ್ ಮಾಗಜಿನ್

ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ವಿಷಯಕ್ಕೆ  ಮರು ಹುಟ್ಟು ನೀಡಲು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಪ್ರಯತ್ನಿಸಿದರೂ, ಅಯೋಧ್ಯಾ ನಗರದ ಹೆಚ್ಚಿನ ಸಂಖ್ಯೆಯ ಸಾಧುಗಳು-ಹೆಚ್ಚಿನವರು ಬಿಜೆಪಿಯ ಹಳೆಯ ಒಡನಾಡಿಗಳು- ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ  ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಅಕ್ಟೋಬರ್ 5 ರಂದು, ವಿಶ್ವ ಹಿಂದೂ ಪರಿಷತ್ ರಾಮ ಮಂದಿರ ನಿರ್ಮಾಣಕ್ಕೆ ರಸ್ತೆಯನ್ನು ರಚಿಸುವ ಉದ್ದೇಶದಿಂದ ದೆಹಲಿಯ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿತು. ಐವತ್ತು ಸಾಧುಗಳು ಪಾಲ್ಗೊಂಡರು, ಆದರೆ ರಾಮ ಜನ್ಮಭೂಮಿಯ ಚಳವಳಿಯ ಕೇಂದ್ರವಾದ ಅಯೋಧ್ಯಾದಿಂದ ಕೇವಲ ಐದು ಮಂದಿ ಮಾತ್ರ ಸೇರಿದ್ದರು.

  ಅಯೋಧ್ಯೆಯ ಸಾಧುಗಳು ಈ ನಡುವೆ , ತಮ್ಮದೇ ಆದ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ನಗರದ ರಾಮ್ಘಾಟ್ ನೆರೆಹೊರೆ ಪ್ರದೇಶದ ತಪಸ್ವಿ ಛವಾನಿ ದೇವಸ್ಥಾನದ ಮಹಾಂತ್ ಪರಮಹಂಸ  ದಾಸ್, ಅಕ್ಟೋಬರ್ 1 ರಂದು ರಾಮ ಮಂದಿರ ನಿರ್ಮಾಣಕ್ಕಿರುವ   ಎಲ್ಲಾ  ತಡೆಗಳನ್ನು ತೆಗೆದುಹಾಕುವಂತೆ ಪ್ರಧಾನಿ ನರೇಂದ್ರ ಮೋದಿ  ಶಾಸನ ಜಾರಿಗೊಳಿಸಬೇಕೆಂದು ಬೇಡಿಕೆಯಿಟ್ಟು  ದೇವಸ್ಥಾನಕ್ಕೆ ಎದುರಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.  ಇದು  ಹಲವಾರು ಸ್ಥಳೀಯ ಸಾಧುಗಳನ್ನು ಸೆಳೆದಿದೆ . ಅವರಲ್ಲಿ ಕೆಲವರು ನಿರಂತರವಾಗಿ ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅವರ ಪ್ರತಿಭಟನೆಯು ವಿಎಚ್ ಪಿ ಯ  ಆಂತರಿಕ ಒಗ್ಗಟ್ಟಿಗೆ  ಬೆದರಿಕೆಯೊಡ್ಡುತ್ತಿದೆ   ಮತ್ತು ಬಿಜೆಪಿಯ ಪ್ರಮುಖ ಬೆಂಬಲ ನೆಲೆಯನ್ನು ಘಾಸಿಗೊಳಿಸುತ್ತಿದೆ.

ವರ್ಷಗಳ ಕಾಲ ವಿಎಚ್ ಪಿ ಯ  ಸಕ್ರಿಯ ಬೆಂಬಲಿಗರಾಗಿರುವ ಪರಮಹನ್ಸ್ ದಾಸ್ ಅವರು ಹೀಗೆ ಹೇಳಿದ್ದಾರೆ,

      “ನಮ್ಮ ಬೇಡಿಕೆ ಸರಳವಾಗಿದೆ, ಸರ್ಕಾರದ ಅವಧಿಯು ಕೊನೆಗೊಳ್ಳುವ ಮೊದಲು ರಾಮ ಮಂದಿರ ನಿರ್ಮಾಣದ ಬಗ್ಗೆ ಬಿಜೆಪಿ ತನ್ನ ಚುನಾವಣಾ ಭರವಸೆಯನ್ನು ಪೂರೈಸಬೇಕು. ಮುಂದೆ ಕಾಯುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು  ನಾವು ಕಂಡುಕೊಂಡಿದ್ದೇವೆ. ಮುಂದಿನ ಕೆಲವು ತಿಂಗಳುಗಳಲ್ಲಿ, ಸಾರ್ವತ್ರಿಕ ಚುನಾವಣೆಯನ್ನುಘೋಷಿಸಲಾಗುವುದು  ಮತ್ತು  ಮಾದರಿ ನೀತಿಯನ್ನು ವಿಧಿಸಲಾಗುವುದು. ರಾಮಮಂದಿರದ ಹೆಸರಿನಲ್ಲಿ ಬಿ ಜೆ ಪಿ ಪುನ: ಮತಗಳನ್ನು ಪಡೆಯುವ ಪ್ರಯತ್ನ ಮಾಡುತ್ತದೆ.  ಅದಕ್ಕಾಗಿಯೇ ನಾನು ಇನ್ನು ಮುಂದಕ್ಕೆ ಕಾಯದೆ ಉಪವಾಸ ಕುಳಿತುಕೊಳ್ಳಲು  ನಿರ್ಧರಿಸಿದೆನು. “

   ಅಯೋಧ್ಯಾ  ಸನ್ಯಾಸಿಗಳ ಪರಂಪರೆಯಾದ  ನಿರ್ವಾಣಿ ಅಖಾರದ  ನಾಯಕರಾದ   ಧರಮ್ ದಾಸ್ ,

     ”ಅವ್ಯವಸ್ಥೆಗೆ ಬಿಜೆಪಿಯೇ  ಕಾರಣವಾಗಿದೆ.  ಅಯೋಧ್ಯಾ ವಿವಾದದ ಬಗ್ಗೆ  ಸುಪ್ರೀಂಕೋರ್ಟ್ ಕಲಾಪವನ್ನು ಆಲಿಸಿದ ನಂತರ  ಬಿಜೆಪಿ, ವಿಹಿಂಪ  ಮತ್ತು ಆರ್ ಎಸ್ಎಸ್ ನಾಯಕರು ದೇವಾಲಯದ ಅಭಿಯಾನವನ್ನು ತೀವ್ರಗೊಳಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡುವವರೆಗೂ ಸರ್ಕಾರ ಯಾವುದೇ ಪ್ರಯತ್ನವನ್ನು ಮಾಡುವುವುದಿಲ್ಲ ಎಂದು ಅವರಿಗೆ  ತಿಳಿದಿದೆ,  ಸಾಧುಗಳನ್ನು ಯಾವಾಗಲೂ ಮೋಸಮಾಡಲು  ಸಾಧ್ಯವಿಲ್ಲ ” ಎಂದಿದ್ದಾರೆ.

   ಈ ಕಾರಣಕ್ಕಾಗಿ ಅಯೋಧ್ಯೆಯಲ್ಲಿ ಸಾಧುಗಳ ಮುಕ್ತ ಸಭೆಯನ್ನು  ಸಂಘಟಿಸಲು ವಿಹಿಂಪ  ಗೆ ಸಾಧ್ಯವಿಲ್ಲ ಎಂದು ಅವರು ಹೇಳಿದರು ಮತ್ತು ಅದರಿಂದಾಗಿಯೇ ದೆಹಲಿಯಲ್ಲಿ ಸಭೆ ನಡೆಸಬೇಕಾಯಿತು. ಇವರು ವಿಹಿಂಪ  ಕೇಂದ್ರ ಆಡಳಿತ ಮಂಡಳಿ ಮತ್ತು  ಕೇಂದ್ರೀಯ ಮಾರ್ಗದರ್ಶಕ ಮಂಡಳಿಯ  ಸದಸ್ಯರಾಗಿದ್ದರೂ, ಧರಮ್ ದಾಸ್ ದೆಹಲಿಯ ಸಭೆಯಲ್ಲಿ ಭಾಗವಹಿಸಲಿಲ್ಲ.

   1984ರಲ್ಲಿ  ರಾಮ ಜನ್ಮಭೂಮಿ ಸಮಸ್ಯೆಯನ್ನು ಎತ್ತಿಕೊಂಡಾಗ, ವಿಹಿಂಪ  ಅಯೋಧ್ಯೆಯ ಸಾಧುಗಳೊಂದಿಗೆ  ಸಕಾರಾತ್ಮಕ  ಸಂಬಂಧವನ್ನು ಹೊಂದಿರಲಿಲ್ಲ .1980 ರ ದಶಕದುದ್ದಕ್ಕೂ, ಅಯೋಧ್ಯಾದಲ್ಲಿನ ಅದರ ಪ್ರಚಾರದಲ್ಲಿ ಸ್ಥಳೀಯ ಸನ್ಯಾಸಿಗಳ  ಬೆಂಬಲ ಅಲ್ಪ ಪ್ರಮಾಣದಲ್ಲಿ ಮಾತ್ರ ಇತ್ತು. ಬೆರಳೆಣಿಕೆಯಷ್ಟು ಸಾಧುಗಳು ಮಾತ್ರ ಪಾಲ್ಗೊಂಡಿದ್ದರು. 1990 ರಲ್ಲಿ “ಮಂದಿರ ಅಲ್ಲಿಯೇ ಕಟ್ಟುವೆವು ” ಘೋಷಣೆಯೊಂದಿಗೆ ಎಲ್.ಕೆ.ಆಡ್ವಾಣಿ ಅವರ ರಥ ಯಾತ್ರೆ ದೇಶದಾದ್ಯಂತ ಹಾದು ಹೋಯಿತು ಮತ್ತು ವಿಹಿಂಪ ನಗರದಲ್ಲಿ ಗಮನಾರ್ಹ ಹೆಗ್ಗುರುತನ್ನು ಕೆತ್ತುವಲ್ಲಿ ಯಶಸ್ವಿಯಾಯಿತು.

    ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸವು  ಈ ಸಂಬಂಧವನ್ನು ದೀರ್ಘಕಾಲ ಉಳಿಸಲಿಲ್ಲ.  1990 ರ ದಶಕದ ಮಧ್ಯಭಾಗದಲ್ಲಿ, ಅಯೋಧ್ಯೆಯ ಸಾಧುಗಳು ಮತ್ತೊಮ್ಮೆ ವಿಂಗಡಿಸಲ್ಪಟ್ಟರು. ಅವರಲ್ಲಿ ಹೆಚ್ಚಿನವರು ತಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಹಿಂದಿರುಗಿದರು, ಕೇವಲ ಬಿಜೆಪಿಗೆ ಸೇರಿದ ಮಾತ್ರವಲ್ಲ   ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡ ರಾಜಕಾರಣಿಗಳೊಂದಿಗೆ,  ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಸ್ನೇಹ ಸಂಬಂಧ ಹೊಂದಿದ್ದರು.

    ”ಕಳೆದ ಲೋಕಸಭಾ ಚುನಾವಣೆ ವೇಳೆ   ಪ್ರಧಾನಿ ಅಭ್ಯರ್ಥಿ  ಮೋದಿಯವರ ಕಾರ್ಯವೈಖರಿ ಅಯೋಧ್ಯೆಯ ಸಾಧುಗಳನ್ನು ಒಂದುಗೂಡಿಸಿತು  ಮತ್ತು ಅವರನ್ನು ವಿಹಿಂಪ ಪ್ರಭಾವಕ್ಕೊಳಪಡಿಸಿತು ” ಎಂದು ಪರಮಹಂಸ  ದಾಸ್ ಹೇಳಿದರು.

   “ಅಯೋಧ್ಯೆಯಲ್ಲಿ ರಾಮ ಮಂದಿರದ  ಭರವಸೆ ನೀಡುವ ಮೂಲಕ ಅಧಿಕಾರಕ್ಕೆ ಬಂದರೂ, ಮೋದಿ ಏನನ್ನೂ ಮಾಡಲಿಲ್ಲ. ಹೆಚ್ಚಿನ ಸಾಧುಗಳು ದ್ರೋಹಕ್ಕೊಳಗಾಗಿದ್ದಾರೆ. ಅದರಿಂದ  ಏನಾದರೂ ಪ್ರಯೋಜನ  ಪಡೆಯಬಹುದೆಂದು ಭಾವಿಸುವವರು ಮಾತ್ರ ವಿಹಿಂಪಗೆ ವಿಧೇಯರಾಗಿದ್ದಾರೆ. ಮೋದಿ ಇದುವರೆಗೂ  ಅಯೋಧ್ಯೆಗೆ ಭೇಟಿ ನೀಡಲಿಲ್ಲ.   ಭರವಸೆಯನ್ನು ಪೂರೈಸುವಂತೆ ಕೇಳಿಕೊಂಡ  ಪ್ರವೀಣ್ ತೊಗಾಡಿಯಾರನ್ನು  ಹೊರಹಾಕಾಲು ಸಹ ಅವರು ಕಾರಣರಾಗಿದ್ದಾರೆ”.

ವಿಹಿಂಪ ಯ ಮಾಜಿ ಅಂತರರಾಷ್ಟ್ರೀಯ ಅಧ್ಯಕ್ಷರಾಗಿದ್ದ ತೊಗಾಡಿಯಾ  ಈಗ ಮೋದಿಯವರ ಪ್ರಮುಖ ಟೀಕಾಕಾರರಾಗಿದ್ದಾರೆ. ಅಯೋಧ್ಯಾದಲ್ಲಿ ಸಾಧುಗಳನ್ನು ಸಮಾಧಾನಿಸಲು ವಿಫಲವಾದ  ವಿಹಿಂಪ ನಾಯಕತ್ವದ ಅಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸಲು ಅವರು  ಆದ್ಯತೆ ನೀಡಲಿಲ್ಲ. ”1984 ರಿಂದಲೂ, ವಿಹಿಂಪದ  15 ಧಾರ್ಮಿಕ ಸಂಸದರು  ಒಂದೇ ನಿರ್ಣಯವನ್ನು ಅಂಗೀಕರಿಸಿದ್ದು, ಅದು ರಾಮ ದೇವಾಲಯದ ನಿರ್ಮಾಣಕ್ಕೆ ದಾರಿಯನ್ನು ತೆರವುಗೊಳಿಸುವಂತೆ  ಕೇಂದ್ರದೊಂದಿಗೆ ಬೇಡಿಕೆ”ಎಂದು ಅವರು ಹೇಳಿದರು.  ”ಈಗ ಬಿಜೆಪಿ ಸರ್ಕಾರ ಲೋಕಸಭೆಯಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿದೆ. ಇಂತಹ ಕಾನೂನನ್ನು ಹೊರಡಿಸುವುದನ್ನು  ಮತ್ತು ಜನಪ್ರಿಯ ಬೇಡಿಕೆ ಪೂರೈಸುವುದನ್ನು ಯಾರು ತಡೆದಿದ್ದಾರೆ ?ಎಂದವರು ಪ್ರಶ್ನಿಸಿದ್ದಾರೆ.