ಸುಪ್ರೀಂಕೋರ್ಟಿಗೆ ಕ್ಯಾನ್ಸರ್ ಪೀಡಿತ ಕೈದಿಯ ಅಳಲು: ‘ತಾಯಿಯ ಮಡಿಲಲ್ಲಿ ಸಾಯಲು ಬಯಸುತ್ತೇನೆ’

0
486

ಹೊಸದಿಲ್ಲಿ,ಮೇ 29: ಬಾಯಿ ಕ್ಯಾನ್ಸರ್ ತುತ್ತಾಗಿರುವ ಆರೋಪಿಯೊಬ್ಬ ತನ್ನ ತಾಯಿಯ ಮಡಿಲಲ್ಲಿ ಕೊನೆಯುಸಿರೆಳೆಯಲು ಬಯಸುತ್ತಿದ್ದು, ಜಾಮೀನು ನೀಡುವಂತೆ ಸುಪ್ರೀಂಕೋರ್ಟಿನ ಮುಂದೆ ಅವಲತ್ತುಕೊಂಡಿದ್ದಾನೆ.  ಈ ಅರ್ಜಿಯಲ್ಲಿ ಕೋರ್ಟು ರಾಜಸ್ತಾನ ಪೊಲೀಸರ ಅಭಿಪ್ರಾಯವನ್ನು ಕೇಳಿದ್ದು ಪ್ರಧಾನ ನ್ಯಾಯಾಧೀಶ ರಂಜನ್ ಗೊಗೊಯಿ, ನ್ಯಾಯಮೂರ್ತಿ ಅನಿರುದ್ಧ ಬೋಸ್‍ರ ಪೀಠವು ರಾಜಸ್ತಾನ ಪೊಲೀಸರಿಗೆ ನೋಟಿಸು ಜಾರಿ ಮಾಡಿತು. ಜಾಮೀನು ಅರ್ಜಿಸಿದ ವ್ಯಕ್ತಿ ನಕಲಿ ಸ್ಟಾಂಪ್ ಪೇಪರ್ ಪ್ರಕರಣದ ಆರೋಪಿಯಾಗಿದ್ದು ಕಳೆದ ವರ್ಷ ಜೈಪುರದಲ್ಲಿ ಈತನನ್ನು ಬಂಧಿಸಲಾಗಿತ್ತು. ರಾಜಸ್ಥಾನ ಹೈಕೋರ್ಟು ಈತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ವಿರುದ್ಧ ಈತ ಸುಪ್ರೀಂಕೋರ್ಟಿನ ಕಟಕಟೆಯೇರಿದ್ದಾನೆ. “ತಾನು ಜೈಲಿನಲ್ಲಿದ್ದು ಮೂರನೆ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಜೈಪುರದ ಒಂದು ಆಸ್ಪತ್ರೆಯಲ್ಲಿ ದಿನಾಲೂ ರೇಡಿಯೊ ತೆರೆಪಿ ಮಾಡಿಸಲಾಗುತ್ತಿದೆ. ಆದ್ದರಿಂದ ತನಗೆ ಜಾಮೀನು ನೀಡಬೇಕೆಂದು ಅರ್ಜಿಯಲ್ಲಿ ವಿನಂತಿಸಿಕೊಂಡಿದ್ದನು. ಈತನಿಗೆ ಕ್ಯಾನ್ಸರ್ ರೋಗ ತಗಲಿದ್ದು ಜೈಲಿನಲ್ಲಿರುವಾಗ ಪತ್ತೆಯಾಗಿತ್ತು.