ರಾಜೀವ್ ತ್ಯಾಗಿ ವಿರುದ್ಧ ವೈಯಕ್ತಿಕ ನಿಂದೆ ನಡೆಸಿದ ಸಂಬಿತ್ ಪಾತ್ರಾ: ಬಂಧನ ಆಗ್ರಹ

0
1500

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.13: ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಾಜೀವ್ ತ್ಯಾಗಿಯ ಸಾವಿಗೆ ಸಂಬಂಧಿಸಿ ಬಿಜೆಪಿ ನಾಯಕ ಸಂಬಿತ್ ಪಾತ್ರಾರನ್ನು ಬಂಧಿಸಬೇಕೆಂಬ ಕೂಗು ಎದ್ದಿದೆ.

ಟಿವಿ ಚ್ಯಾನೆಲ್ ಚರ್ಚೆಯ ನಡುವೆ ತೀವ್ರ ಹರಿತವಾದ ಭಾಷೆಯಲ್ಲಿ ತ್ಯಾಗಿಯನ್ನು ವ್ಯಕ್ತಿ ಪರವಾಗಿ ಸಂಬಿತ್ ಪಾತ್ರ ಟೀಕಿಸಿದ್ದರು. ಇದಾದ ನಂತರ ತ್ಯಾಗಿ ಹೃದಯಾಘಾತಕ್ಕೊಳಗಾಗಿದ್ದರು. ಇದು ಸಾವಿಗೂ ಕಾರಣವಾಯಿತು. ಪಾತ್ರಾರ ವಿಷಮಯ ಮಾತುಗಳಿಗೆ ಅಸ್ವಸ್ಥಗೊಂಡುದನ್ನು ತ್ಯಾಗಿ ದೈಹಿಕ ಕಷ್ಟ ಅನುಭವಿಸುವುದು ಚ್ಯಾನೆಲ್ ಲೈವ್ ಚರ್ಚೆಯ ವೇಳೆಯೇ ಗೋಚರಿಸಿತ್ತು.

52 ವರ್ಷದ ತ್ಯಾಗಿಯ ಅಕಾಲಿಕ ನಿಧನಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪಾತ್ರ ವಿರುದ್ಧ ಆಕ್ರೋಶ ಹೆಡೆಯೆತ್ತಿದೆ. ಆರೆಸ್ಟ್ ಸಂಬಿತ್ ಪಾತ್ರಾ ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್‌ನಲ್ಲಿ ಟ್ರಂಡಿಂಗ್ ಆಗಿದೆ.

ಕಾಂಗ್ರೆಸ್ ಕೂಡ ಈ ಬೇಡಿಕೆಯನ್ನು ಮುಂದಿಟ್ಟು ರಂಗಪ್ರವೇಶಿಸಿದೆ.ಬುಧವಾರ ಸಂಜೆ ಐದು ಗಂಟೆಗೆ ಆಜ್‍ ತಕ್ ಟಿವಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಬಳಿಕ ತ್ಯಾಗಿ ನಿಧನರಾದರು.

ಎದೆ ನೋವು ಎಂದು ಕುಸಿದು ಬಿದ್ದ ಅವರನ್ನು ಕೂಡಲೇ ಯಶೋದಾ ಆಸ್ಪತ್ರೆಗೆ ಕರೆದು ಕೊಂಡು ಹೋದರೂ ಜೀವ ರಕ್ಷಿಸಲು ಆಗಿಲ್ಲ.

ಬೆಂಗಳೂರಿನಲ್ಲಿ ಕಳೆದ ದಿವಸದ ಅಕ್ರಮ ಘಟನೆಗಳಿಗೆ ಸಂಬಂಧಪಟ್ಟು ಆಜ್‍ ತಕ್ ಚರ್ಚೆ ಮಾಡುತ್ತಿತ್ತು. ಚರ್ಚೆಯ ನಡುವೆ ಸಂಬಿತ್ ಪಾತ್ರರ ಆರೋಪಗಳಿಗೆ ತ್ಯಾಗಿ ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲವಾದರೂ ಅವರು ಈ ನಿಂದೆಗಳಿಂದ ಮಾನಸಿಕ ಆಘಾಯಕ್ಕೊಳಗಾಗಿದ್ದು ಅವರ ಮುಖಭಾವದಲ್ಲಿ ಗೋಚರಿಸುತ್ತಿತ್ತು.

ಸಂಬಿತ್ ಪಾತ್ರಾ ತ್ಯಾಗಿಯವರ ಮೇಲೆ ತೀರ ವೈಯಕ್ತಿಕ ನಿಂದೆಯನ್ನು ನಡೆಸಿದ್ದು, ಈ ಚರ್ಚೆಯ ನಂತರ ರಾಜೀವ್ ತ್ಯಾಗಿ ಕುಸಿದು ಬಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.