ರಾಹುಲ್ ರಾಜೀನಾಮೆಯ ಟ್ರಂಡನ್ನು ಆರಂಭಿಸಿದರು, ಕರ್ನಾಟಕದ ವಿಷಯದಲ್ಲಿ ನಮ್ಮನ್ನು ದೂರಬೇಡಿ- ರಾಜನಾಥ್ ಸಿಂಗ್

0
495

ಹೊಸದಿಲ್ಲಿ, ಜು. 8: ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಗೆ ಬಿಜೆಪಿಯನ್ನು ದೂರಬೇಡಿ. ಇದಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಹೇಳಿದರು. ನಮ್ಮ ಪಾರ್ಟಿ ಇನ್ನೊಂದು ಪಾರ್ಟಿಯ ಶಾಸಕರ ಮೇಲೆ ಒತ್ತಡ ಹೇರಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕರ್ನಾಟಕದ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ಕಾರಣ ಎಂಬ ಕಾಂಗ್ರೆಸ್ ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ಪಾರ್ಲಿಮೆಂಟರಿ ಪ್ರಜಾಪ್ರಭುತ್ವದ ಅಂತಸ್ತು ಕಾಪಾಡುವುದಕ್ಕೆ ನಾವು ಪ್ರತಿಜ್ಞಾ ಬದ್ಧರಿದ್ದೇವೆ. ಕಾಂಗ್ರೆಸ್‍ನಲ್ಲಿ ರಾಜೀನಾಮೆ ನೀಡುವ ಟ್ರಂಡ್‍ಗೆ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಅದನ್ನುನಾವು ಆರಂಭಿಸಿದ್ದಲ್ಲ. ಅವರೇ ಜನರೊಡನೆ ರಾಜೀನಾಮೆ ನೀಡಲು ಹೇಳಿರಬಹುದು.

ಹಿರಿಯ ನಾಯಕರು ಕೂಡ ರಾಜೀನಾಮೆ ನೀಡುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ನೀಡಿದ ರಾಜೀನಾಮೆಯಿಂದಾಗಿ ನಾಯಕರು ಪಕ್ಷದ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ ಎನ್ನುವುದನ್ನು ರಾಜನಾಥ್ ಸಿಂಗ್ ಪರೋಕ್ಷವಾಗಿ ಸೂಚಿಸಿದರು.