ಸೌದಿ ಏರ್ ಲೈನ್ಸ್ ನಿಂದ ಹಜ್ ಯಾತ್ರೆಗೆ 165 ವಿಮಾನಗಳು

0
922

ಜಿದ್ದ, ಜು. 8: ಆಂತರಿಕ ಮತ್ತು ವಿದೇಶ ಸೆಕ್ಟರಿನಲ್ಲಿ ಹಜ್ ಯಾತ್ರೆಗೆ 165 ವಿಮಾನಗಳನ್ನು ನೀಡಲಾಗಿದೆ ಎಂದು ಸೌದಿ ಏರ್ ಲೈನ್ಸ್ ತಿಳಿಸಿದೆ. 17 ವಿಮಾನಗಳು ಹೆಚ್ಚು ಸಲ ಸರ್ವಿಸ್ ನಡೆಸಲಿದೆ. ಯಾತ್ರಿಕರನ್ನು ಕರೆತರಲು ಜಗತ್ತಿನ ನೂರಕ್ಕೂ ಹೆಚ್ಚು ಸ್ಥಳಗಳಿಗೆ ಸರ್ವಿಸ್ ನಡೆಸಲಾಗುವುದು. ಈ ಬಾರಿ 12 ಲಕ್ಷ ಯಾತ್ರಿಕರ ಗುರಿಯನ್ನು ಸೌದಿ ಏರ್ ಲೈನ್ಸ್ ಇರಿಸಿಕೊಂಡಿದೆ. ಹಿಂದಿನ ವರ್ಷಕ್ಕಿಂತ ಈ ಸಲ ಸೌದಿ ಮೂಲಕ ಬರುವ ಯಾತ್ರಿಕರ ಸಂಖ್ಯೆ ಶೇ. 10ರಷ್ಟು ಹೆಚ್ಚಳವಾಗುವ ನಿರೀಕ್ಷೆಯನ್ನು ಸೌದಿ ಏರ್ ಲೈನ್ಸ್ ವ್ಯಕ್ತಪಡಿಸಿದೆ. ವಿಮಾನದ ಒಳಗೆ ವಿವಿಧ ಸೇವಾ ಕೇಂದ್ರಗಳ ಎಲ್ಲ ವಿಭಾಗಳು ಇರಲಿವೆ. ಯಾತ್ರಿಕರಿಗೆ ಉತ್ಕೃಷ್ಟ ಸೇವೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಸೌದಿ ಏರ್ ಲೈನ್ಸ್ ನ ಎನ್‍ಜಿ ಸಾಲಿಹ್ ಅಲ್‍ಜಾಸಿರ್ ತಿಳಿಸಿದರು.

ಸಿವಿಲ್ ಎವಿಯೇಶನ್ ಅಥಾರಿಟಿ ಸಹಕಾರದಲ್ಲಿ ಉತ್ತಮ ಸೇವೆಗಳನ್ನು ಲಭ್ಯಗೊಳಿಸುವುದು ಮತ್ತು ವಿಷನ್ 2030ರ ಕಾರ್ಯಕ್ರಮವನ್ನು ಪೂರ್ತಿಗೊಳಿಸುವುದು ಉದ್ದೇಶವಾಗಿದೆ. ಯಾತ್ರೆ ಆರಂಭಿಸುವಾಗಲೇ ಮರಳುವ ಬೋರ್ಡಿಂಗ್ ಪಾಸ್ ನೀಡಲಾಗುವುದು. ಯಾತ್ರಿಕರಿಗೆ ಹಜ್ ವಿಷಯಗಳಲ್ಲಿ ಗಮನವನ್ನು ಹೆಚ್ಚು ಕೇಂದ್ರೀಕರಿಸಲು ಇದು ಸಹಾಯಕವಾಗಿದೆ. ಹಜ್ ಮುಗಿದ ಕೂಡಲೇ ಟಿಕೆಟ್ ಬುಕ್ಕಿಂಗ್‍ಗಾಗಿ ಟ್ರಾವೆಲ್ಸ್ ಗೆ ಬಂದು ಖಚಿತಪಡಿಸಿಕೊಳ್ಳುವ ಆವಶ್ಯಕತೆಯಿಲ್ಲ. ಯಾತ್ರಿಕರು ತುಂಬಬೇಕಾದ ಕಾರ್ಡುಗಳನ್ನು ಹಜ್ ಸೀಸನ್ ಮೊದಲು ವಿದೇಶಿ ರಾಷ್ಟ್ರಗಳ ವಿಮಾನ ನಿಲ್ದಾಣಗಳಿಗೆ ಕಳುಹಿಸಿಕೊಡಲಾಗಿದೆ. ಹಜ್ ಕುರಿತ ಮಾಹಿತಿ ವಿವರಗಳಿಗೆ ವಿಮಾನ ನಿಲ್ದಾಣದೊಳಗೆ ವೀಡಿಯೊ ಮೂಲಕ ಪ್ರದರ್ಶಿಸುವ ಏರ್ಪಾಟು ಇದೆ. ಲಗೇಜು ಕುರಿತು ಕರಪತ್ರ ಕೂಡ ನೀಡಲಾಗುತ್ತದೆ. ಅದರಲ್ಲಿ ಸೂಕ್ತ ವಿವರಗಳನ್ನು ನೀಡಲಾಗಿದೆ. ಅಗತ್ಯವಾದರೆ ಹೆಚ್ಚು ಸರ್ವಿಸ್ ನಡೆಸಲಾಗುವುದು ಎಂದು ಸೌದಿ ಏರ್ ಲೈನ್ಸ್ ನ ಜನರಲ್ ಮ್ಯಾನೇಜರ್ ತಿಳಿಸಿದರು.