ರಾಮ ಮಂದಿರ ಭಾರತದ ಒಗ್ಗಟ್ಟಿನ ಪ್ರತೀಕ: ಸಿಎಂ ಯೋಗಿ ಆದಿತ್ಯನಾಥ್

0
262

ಸನ್ಮಾರ್ಗ ವಾರ್ತೆ

ಲಕ್ನೊ: ರಾಮ ಮಂದಿರ ಭಾರತದ ಒಗ್ಗಟ್ಟಿನ ಪ್ರತೀಕ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಅವರು ರಾಮ ಮಂದಿರದ ಗರ್ಭಗುಡಿ ಶಿಲಾನ್ಯಾಸದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡುತ್ತಾ ಹೀಗೆಂದರು.

ಎರಡು ವರ್ಷ ಮೊದಲು ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣ ಆರಂಭಿಸಿದರು. ನಿರ್ಮಾಣ ಕಾರ್ಯ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ. ಉತ್ತರಪ್ರದೇಶದ ರಾಮ ಮಂದಿರ ಇಡೀ ಭಾರತದ ಮಂದಿರವಾಗಿದೆ. ಇಷ್ಟು ಕಾಲ ರಾಮ ಮಂದಿರಕ್ಕೆ ಜನರು ಕಾಯುತ್ತಿದ್ದರು. ಇದು ಭಾರತದ ಪ್ರತೀಕವಾಗಿದೆ ಎಂದು ಯೋಗಿ ಹೇಳಿದರು.

ಶ್ರೀರಾಮ ಜನ್ಮಭೂಮಿ ತೀರ್ಥ ಯಾತ್ರೆ ಟ್ರಸ್ಟ್ ನೇತೃತ್ವದಲ್ಲಿ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 2020 ಆಗಸ್ಟ್ ಐದಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದರು. 2023 ಡಿಸೆಂಬರಿನಲ್ಲಿ ಮಂದಿರ ಸಾರ್ವಜನಿಕರಿಗೆ ತೆರೆದು ಕೊಡುವ ಉದ್ದೇಶ ಇದೆ ಎಂದು ಯೋಗಿ ತಿಳಿಸಿದರು.

ರಾಮಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡ ನಂತರ ಕಾಶಿ, ಮಥುರಾ ಎಚ್ಚರಗೊಂಡಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು. ಕಾಶಿ ಮತ್ತು ಮಥುರಾದ ಮಸೀದಿಯ ಮೇಲೆ ಹಿಂದುತ್ವ ಸಂಘಟನೆ ಹಕ್ಕುವಾದ ಎತ್ತಿದಾಗ ಅವರು ಹೀಗೆ ಹೇಳಿದ್ದರು.